ಮುಂಬೈ, ಜು. 20 (DaijiworldNews/AK): ಚಾಂಪಿಯನ್ಸ್ ಲೀಗ್ ಟಿ20 ಇದೀಗ ಟಿ20 ಲೀಗ್ ಯಾವಾಗ ನಡೆಯಲಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಸಿಂಗಾಪುರದಲ್ಲಿ ನಡೆಯುತ್ತಿರುವ ಐಸಿಸಿ ಸಭೆಯಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಅನ್ನು ಮತ್ತೆ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ 2008 ರಿಂದ ಆರಂಭವಾಗಿದ್ದ ಈ ಲೀಗ್ 2014 ರಲ್ಲಿ ನಾನಾ ಕಾರಣಗಳಿಂದ ರದ್ದಾಗಿತ್ತು. ಆದರೀಗ ಹಲವು ದೇಶಗಳಲ್ಲಿ ಟಿ20 ಲೀಗ್ ನಡೆಯುತ್ತಿದ್ದು, ಇದರ ಜನಪ್ರಿಯತೆಯಿಂದ ಆಯೋಜಕರು ಮತ್ತೆ ಚಾಂಪಿಯನ್ಸ್ ಲೀಗ್ ಟಿ20ಯನ್ನು ಆರಂಭಿಸಲು ಮುಂದಾಗಿದ್ದಾರೆ. ಅದರಂತೆ ಪ್ರಸ್ತುತ ಕೇಳಿಬಂದಿರುವ ಮಾಹಿತಿಯ ಪ್ರಕಾರ ಈ ಲೀಗ್ 2026 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಬಹುದು ಎಂದು ವರದಿಯಾಗಿದೆ.
ಟಿ20 ಚಾಂಪಿಯನ್ಸ್ ಲೀಗ್ ಮತ್ತೆ ಆರಂಭವಾಗುತ್ತಿದೆ. ಈ ಲೀಗ್ನಲ್ಲಿ ಈ ಹಿಂದಿನಂತೆ ಪ್ರಪಂಚದಾದ್ಯಂತದ ಅಗ್ರ ಟಿ20 ಫ್ರಾಂಚೈಸಿ ತಂಡಗಳು ಪರಸ್ಪರ ಆಡಲಿವೆ. ಮಾಧ್ಯಮ ವರದಿಗಳ ಪ್ರಕಾರ, ಮುಂದಿನ ವರ್ಷ ಸೆಪ್ಟೆಂಬರ್ನಲ್ಲಿ ಟಿ20 ಚಾಂಪಿಯನ್ಸ್ ಲೀಗ್ ಅನ್ನು ಮತ್ತೆ ಪ್ರಾರಂಭಿಸಲಾಗುವುದು.