ಮುಂಬೈ, ಜು. 21 (DaijiworldNews/AK): 2024 ರಲ್ಲಿಯೇ ಇಂಗ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಭಾರತದ ಯುವ ಕ್ರಿಕೆಟಿಗ ಸರ್ಫರಾಜ್ ಖಾನ್ ಅವರಿಗೆ ಇನ್ನೂ ವಿದೇಶದಲ್ಲಿ ಟೆಸ್ಟ್ ಆಡಲು ಅವಕಾಶ ದೊರೆತಿಲ್ಲ.

ಭಾರತ ಎ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಸರ್ಫರಾಜ್ಗೆ ಭಾರತ ತಂಡದಲ್ಲಿ ಅವಕಾಶ ಸಿಗಲಿಲ್ಲ. ಈ ಆಘಾತದ ನಡುವೆಯೇ ಭಾರತಕ್ಕೆ ಬಂದಿದ್ದ ಸರ್ಫರಾಜ್ ಖಾನ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ತಂಡಕ್ಕೆ ತಮ್ಮ ಆಯ್ಕೆಗೆ ಅಡ್ಡಿಯಾಗಿದ್ದ ಫಿಟ್ನೆಸ್ ಮೇಲೆ ಸಾಕಷ್ಟು ಕೆಲಸ ಮಾಡಿರುವ ಸರ್ಫರಾಜ್ ಬರೋಬ್ಬರಿ 1೭ ಕೆಜಿ ತೂಕ ಇಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯದ ನಂತರ ಧೃತಿಗೆಡದ ಸರ್ಫರಾಜ್, ತಮ್ಮ ಫಿಟ್ನೆಸ್ ಮೇಲೆ ಕೆಲಸ ಮಾಡಿದ್ದಾರೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈಗ ಎಲ್ಲರ ಗಮನ ಸೆಳೆದಿದೆ. ವರದಿಗಳ ಪ್ರಕಾರ, ಸರ್ಫರಾಜ್ ಖಾನ್ ಕೇವಲ ಎರಡು ತಿಂಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ
ಸರ್ಫರಾಜ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ, ಈ ಫೋಟೋದಲ್ಲಿ ಅವರು ಜಿಮ್ನಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಸ್ಲಿಮ್ ಆಗಿ ಕಾಣುತ್ತಿದ್ದಾರೆ. ತಮ್ಮ ಅಧಿಕ ತೂಕಕ್ಕಾಗಿ ಟ್ರೋಲ್ ಮತ್ತು ಟೀಕೆಗೆ ಒಳಗಾಗಿದ್ದ ಸರ್ಫರಾಜ್ ಈಗ ಸಾಕಷ್ಟು ಫಿಟ್ ಆಗಿ ಕಾಣುತ್ತಿದ್ದಾರೆ, ಇದನ್ನು ನೋಡಿ ಎಲ್ಲರೂ ಆಶ್ಚರ್ಯಗೊಂಡಿದ್ದು, ಫಿಟ್ನೆಸ್ನಲ್ಲಿ ಸರ್ಫರಾಜ್ ಖಾನ್ ವಿರಾಟ್ ಕೊಹ್ಲಿಗೆ ಸ್ಪರ್ಧೆ ನೀಡಿದ್ದಾರೆ ಎಂದು ಅಭಿಮಾನಿಗಳು ನುಡಿದಿದ್ದಾರೆ.