ಮುಂಬೈ, ಆ. 05 (DaijiworldNews/AK): ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಸದ್ಯ ಮುಗಿದಿದೆ. 5 ಪಂದ್ಯಗಳ ಸರಣಿಯನ್ನು 2-2 ಅಂತರದಿಂದ ಟೀಮ್ ಇಂಡಿಯಾ ಯಶಸ್ವಿ ಪಡೆದಿದೆ. ಈ ಸರಣಿಯಲ್ಲಿ ಭಾರತದ ಪರ ಬ್ಯಾಟರ್ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಸರಣಿವೊಂದರಲ್ಲಿ 350೦ಕ್ಕೂ ಹೆಚ್ಚು ರನ್ ಕಲೆಹಾಕಿದೆ. 5 ಪಂದ್ಯಗಳ ಮೂಲಕ ಭಾರತೀಯ ಬ್ಯಾಟರ್ಗಳು ಕಲೆಹಾಕಿದ ಒಟ್ಟು ಸ್ಕೋರ್ ಬರೋಬ್ಬರಿ 3809 ರನ್ಗಳು. ಈ ಮೂಲಕ 1979 ರಲ್ಲಿ ನಿರ್ಮಾಣವಾಗಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.
1979 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ 3270 ರನ್ ಕಲೆಹಾಕಿದ್ದರು. ಆದರೆ ಅದು 6 ಪಂದ್ಯಗಳ ಸರಣಿಯಾಗಿತ್ತು. ಈ ಬಾರಿ ಟೀಮ್ ಇಂಡಿಯಾ 5 ಪಂದ್ಯಗಳ ಸರಣಿಯ ಮೂಲಕ ಒಟ್ಟು 3809 ರನ್ಗಳನ್ನು ಕಲೆಹಾಕಿದ್ದಾರೆ. ಈ ಮೂಲಕ ಟೆಸ್ಟ್ ಇತಿಹಾಸದಲ್ಲಿ ಸರಣಿವೊಂದರಲ್ಲಿ 3800 ಕ್ಕೂ ಹೆಚ್ಚು ರನ್ ಕಲೆಹಾಕಿದ ವಿಶ್ವದ 2ನೇ ತಂಡ ಎನಿಸಿಕೊಂಡಿದೆ.