ಮುಂಬೈ, ಆ. 17 (DaijiworldNews/TA): ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದಾಗ್ಯೂ ವೃತ್ತಿಜೀವನದ ವಿಚಾರದಲ್ಲಿ ಅರ್ಜುನ್ಗೆ ದೊಡ್ಡ ಶಾಕ್ ಎದುರಾಗಿದೆ. ರಣಜಿ ಟ್ರೋಫಿಯ ಪ್ಲೇಟ್ ಗ್ರೂಪ್ನಲ್ಲಿ ನಾಲ್ಕು ಪಂದ್ಯಗಳಲ್ಲಿ 16 ವಿಕೆಟ್ಗಳನ್ನು ಕಬಳಿಸಿದ್ದ ಅರ್ಜುನ್ ತೆಂಡೂಲ್ಕರ್ ಅವರನ್ನು ದುಲೀಪ್ ಟ್ರೋಫಿಗಾಗಿ ಈಶಾನ್ಯ ವಲಯ ತಂಡದಲ್ಲಿ ಸೇರಿಸಲಾಗಿಲ್ಲ. ದುಲೀಪ್ ಟ್ರೋಫಿಯಲ್ಲಿ ಅರ್ಜುನ್ಗೆ ಅವಕಾಶ ಸಿಕ್ಕಿಲ್ಲ. ಗೋವಾ ಪರ ದೇಶೀಯ ಕ್ರಿಕೆಟ್ ಆಡುವ ಅರ್ಜುನ್ ತೆಂಡೂಲ್ಕರ್ ದುಲೀಪ್ ಟ್ರೋಫಿಯಲ್ಲಿ ಆಡುವ ಭರವಸೆಯಲ್ಲಿದ್ದರು, ಆದರೆ ಭರವಸೆ ಹುಸಿಯಾಗಿವೆ.

ರೊಂಗ್ಸೆನ್ ಜೊನಾಥನ್ ನಾಯಕತ್ವದ ಈ ತಂಡವು ಆಗಸ್ಟ್ 28 ರಂದು ಕೇಂದ್ರ ವಲಯವನ್ನು ಎದುರಿಸಲಿದೆ. ರಣಜಿ ಟ್ರೋಫಿಯ ಪ್ಲೇಟ್ ಗ್ರೂಪ್ನ ನಾಲ್ಕು ಪಂದ್ಯಗಳಲ್ಲಿ ಅರ್ಜುನ್ ತೆಂಡೂಲ್ಕರ್ 16 ವಿಕೆಟ್ಗಳನ್ನು ಕಬಳಿಸಿದ್ದರು. ಈ ಕಾರಣದಿಂದಾಗಿ, ಗೋವಾ ಪ್ಲೇಟ್ ಡಿವಿಷನ್ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿತ್ತು. ಡಿಸೆಂಬರ್ 2023 ರಲ್ಲಿ ಗೋವಾ ಪರ ತಮ್ಮ ಮೊದಲ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದ ಅರ್ಜುನ್, ಭರ್ಜರಿ ಶತಕ ಬಾರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇದುವರೆಗೆ 37 ವಿಕೆಟ್ಗಳನ್ನು ಕಬಳಿಸಿರುವ ಅರ್ಜುನ್ 532 ರನ್ ಬಾರಿಸಿದ್ದಾರೆ.
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಮತ್ತು ಅನುಭವಿ ಬ್ಯಾಟ್ಸ್ಮನ್ ರುತುರಾಜ್ ಗಾಯಕ್ವಾಡ್ ದುಲೀಪ್ ಟ್ರೋಫಿಯಲ್ಲಿ ಆಡಲಿದ್ದಾರೆ. ಈ ಟೂರ್ನಮೆಂಟ್ನಲ್ಲಿ ಶಾರ್ದೂಲ್ ಠಾಕೂರ್ ನಾಯಕತ್ವದಲ್ಲಿ ರುತುರಾಜ್ ಗಾಯಕ್ವಾಡ್ ಪಶ್ಚಿಮ ವಲಯ ತಂಡಕ್ಕಾಗಿ ಆಡಲಿದ್ದಾರೆ. ಶುಭ್ಮನ್ ಗಿಲ್, ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು ಮುನ್ನಡೆಸಲಿದ್ದಾರೆ.
ದುಲೀಪ್ ಟ್ರೋಫಿಯ ಫೈನಲ್ ಸೆಪ್ಟೆಂಬರ್ 11 ರಿಂದ 15 ರವರೆಗೆ ನಡೆಯಲಿದೆ. ಆಗಸ್ಟ್ 28 ರಿಂದ 31 ರವರೆಗೆ ನಡೆಯಲಿರುವ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ, ಉತ್ತರ ವಲಯವು ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯವನ್ನು ಎದುರಿಸಲಿದೆ. ಈಶಾನ್ಯ ವಲಯವು ಧ್ರುವ್ ಜುರೆಲ್ ನೇತೃತ್ವದ ಮಧ್ಯ ವಲಯವನ್ನು ಎದುರಿಸಲಿದೆ. ಎಲ್ಲಾ ಪಂದ್ಯಗಳು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ನಡೆಯಲಿವೆ ಎಂದು ಹೇಳಲಾಗಿದೆ.