ಇಸ್ಲಮಾಬಾದ್, ಅ. 28 (DaijiworldNews/AA): ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಣ ಟಿ೨೦ ಸರಣಿಯು ಇಂದಿನಿಂದ ಪ್ರಾರಂಭವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಪಾಕಿಸ್ತಾನ್ ತಂಡವು ಪಿಂಕ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ.

ಸಾಮಾನ್ಯವಾಗಿ ಗ್ರೀನ್ ಜೆರ್ಸಿ ಧರಿಸುವ ಪಾಕ್ ಪಡೆ ಈ ಬಾರಿ ಗುಲಾಬಿ ಬಣ್ಣದೊಂದಿಗೆ ಕಾಣಿಸಿಕೊಳ್ಳಲು ಮುಖ್ಯ ಕಾರಣ #PINKtober ಅಭಿಯಾನ. ಅಂದರೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಾಕಿಸ್ತಾನ್ ಆಟಗಾರರು ತನ್ನ ಜೆರ್ಸಿ ಬಣ್ಣ ಬದಲಿಸಿದೆ.
#PINKtober ಅಭಿಯಾನದ ಭಾಗವಾಗಿ, ಪಾಕಿಸ್ತಾನ್ ತಂಡದ ಆಟಗಾರರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಲಿದ್ದಾರೆ. ಸೌತ್ ಆಫ್ರಿಕಾದ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಗುಲಾಬಿ ಬಣ್ಣದ ರಿಬ್ಬನ್ಗಳನ್ನು ಧರಿಸಲಿದ್ದಾರೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.