ನವದೆಹಲಿ,ಜು 03 (Daijiworld News/MSP): ವಿಶ್ವಕಪ್ ಕ್ರಿಕೆಟ್’ನಲ್ಲಿ ಅವಕಾಶ ಕಳೆದುಕೊಂಡ ಮಧ್ಯಮ ಕ್ರಮಾಂಕದ ಆಟಗಾರ 33 ವರ್ಷದ ಭಾರತ ತಂಡದ ಬಲಗೈ ಬ್ಯಾಟ್ಸ್ಮನ್ ಅಂಬಟಿ ರಾಯುಡು ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಆಂದ್ರದ ಗುಂಟೂರು ಮೂಲದ ಕ್ರಿಕೆಟರ್ ರಾಯುಡು, 55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು 3 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 47.05 ಸರಾಸರಿಯೊಂದಿಗೆ 1694 ರನ್ಗಳಿಸಿದ್ದರು.
ಈ ಬಾರಿ ವಿಶ್ವಕಪ್ನಲ್ಲಿ ಶಿಖರ್ ಧವನ್ ಮತ್ತು ವಿಜಯ್ ಶಂಕರ್ ಅವರು ಗಾಯಾಳಾಗಿ ತಂಡದಿಂದ ಹೊರಬಿದ್ದ ಬಳಿಕ ತಂಡದಲ್ಲಿ ಅವಕಾಶ ಪಡೆಯುವನಿರೀಕ್ಷೆಯಲ್ಲಿದ್ದರು. ಆದರೆ ಆಯ್ಕೆಗಾರರು ಅಚ್ಚರಿ ಎಂಬಂತೆ ಮಾಯಾಂಕ್ ಅಗರ್ವಾಲ್ ಮತ್ತು ರಿಷಭ್ ಪಂತ್ ಅವರನ್ನು ತಂಡಕ್ಕೆ ಕರೆಸಿಕೊಂಡಿದ್ದರು.
ಬಿಸಿಸಿಐ ಆಯ್ಕೆ ಸಮಿತಿಯ ಈ ನಿರ್ಧಾರದ ಬಳಿಕ ಬೇಸರಗೊಂಡಿರುವ ಅಂಬಟಿ ರಾಯುಡು ಅವರು ಇಂದು ರಾಜೀನಾಮೆ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗಿದೆ.