ನವದೆಹಲಿ, ಡಿ. 14 (DaijiworldNews/AA): WWE ಸೂಪರ್ಸ್ಟಾರ್, 17 ಬಾರಿ ಚಾಂಪಿಯನ್ ಆಗಿರುವ ಜಾನ್ ಸೀನಾ ಅವರು ಗುಂಥರ್ ವಿರುದ್ಧ ಸೋಲಿನೊಂದಿಗೆ ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಶನಿವಾರ ರಾತ್ರಿ ಗುಂಥರ್ ವಿರುದ್ಧದ ವಿದಾಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ WWE ಗೆ ವಿದಾಯ ಹೇಳಿದ್ದಾರೆ. ಸೀನಾ ಅವರ 23 ವರ್ಷಗಳ ಅದ್ಭುತ ವೃತ್ತಿಜೀವನಕ್ಕೆ ಸೂಕ್ತವಾದ ಬೀಳ್ಕೊಡುಗೆ ಸಿಗಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ, ವಿದಾಯ ಪಂದ್ಯವನ್ನು ಸೋತಿದ್ದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.
2002ರ ಜೂನ್ 27 ರಂದು ಸ್ಮ್ಯಾಕ್ಡೌನ್ನಲ್ಲಿ ಜಾನ್ ಸೀನಾ WWE ಗೆ ಪಾದಾರ್ಪಣೆ ಮಾಡಿದರು. 17 ಬಾರಿ WWE ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಕಂಪನಿಯ ಪ್ರಶಸ್ತಿ ಇತಿಹಾಸದಲ್ಲಿ ಅವರು ಅಗ್ರಸ್ಥಾನದಲ್ಲಿರುವ ದಾಖಲೆಯನ್ನು ಹೊಂದಿದ್ದಾರೆ. ಅವರು ಆರು ಬಾರಿ ರೆಸಲ್ಮೇನಿಯಾದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಇಂಟರ್ಕಾಂಟಿನೆಂಟಲ್ ಪ್ರಶಸ್ತಿ ಸೇರಿದಂತೆ WWE ನ ಪ್ರಮುಖ ಚಾಂಪಿಯನ್ಶಿಪ್ಗಳನ್ನು ಗೆಲ್ಲುವ ಮೂಲಕ ಗ್ರ್ಯಾಂಡ್ ಸ್ಲಾಮ್ ಅನ್ನು ಪೂರ್ಣಗೊಳಿಸಿದ್ದಾರೆ.