ಜಮ್ಮು-ಕಾಶ್ಮೀರ, ಜು 26(DaijiworldNews/SM): ಟೀಂ ಇಂಡಿಯಾದ ಪಾಲಿಗೆ ಯಶಸ್ವಿ ನಾಯಕ ಎಣಿಸಿಕೊಂಡಿದ್ದ, ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಅವರು ಸೇನಾ ತರಬೇತಿ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದಾರೆ. ಕಾರ್ಗಿಲ್ ವಿಜಯ ದಿವಸವಾದ ಇಂದು ಯೋಧರೊಂದಿಗೆ ಗಡಿಯಲ್ಲಿ ಧೋನಿ ಗಸ್ತು ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
15 ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಎಂ.ಎಸ್. ಧೋನಿಯವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಈ ಅವಧಿಯಲ್ಲಿ ಅವರು ಸೇನೆಯೊಂದಿಗೆ ಇದ್ದು, ಗಸ್ತು, ಕಾವಲು ಕರ್ತವ್ಯಗಳನ್ನು ಮಾಡಲಿದ್ದಾರೆ.
ಇನ್ನು ಈಗಾಗಲೇ ವಿಶ್ವಕಪ್ ಟೂರ್ನಿ ಮುಗಿದಿದ್ದು, ಈ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಸೇನೆಯಲ್ಲಿ ತರಬೇತಿ ಪಡೆಯಲು ಮುಂದಾಗಿದ್ದರು. ಹಾಗೂ ದೇಶ ಸೇವೆ ನಡೆಸಲು ನಿರ್ಧರಿಸಿದ್ದರು.