ಬ್ಯಾಂಕಾಕ್,ಫೆ. 15 (DaijiworldNews/AK): ಏಷ್ಯಾ ಕಪ್ ವುಮೆನ್ ರೈಸಿಂಗ್ ಸ್ಟಾರ್ ಟೂರ್ನಿಯಲ್ಲಿ ಭಾರತ ಎ ತಂಡ ಪಾಕಿಸ್ತಾನದ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕ್ 18.5 ಓವರ್ಗಳಲ್ಲಿ 93 ರನ್ಗಳಿಗೆ ಆಲೌಟ್ ಆಗಿತ್ತು. ಸುಲಭದ ಸವಾಲನ್ನು ಬೆನ್ನಟ್ಟಿದ ಭಾರತ 59 ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 97 ರನ್ ಹೊಡೆದು ಜಯಗಳಿಸಿತು.
ಭಾರತದ ಪರ ದಿನೇಶ್ ವೃಂದ ಔಟಾಗದೇ 55 ರನ್, ಅನುಷ್ಕಾ ಶರ್ಮಾ 24 ರನ್ ಹೊಡೆದರು. ಬೌಲಿಂಗ್ನಲ್ಲಿ ಸೈಮಾ ಠಾಕೂರ್ ನಾಯಕಿ ರಾಧಾ ಯಾದವ್ , ಪ್ರೇಮಾ ರಾವತ್ ಅವರು ತಲಾ 2 ವಿಕೆಟ್ ಪಡೆದರು.