ಮುಂಬೈ, ಫೆ. 22 (DaijiworldNews/AA): ಭಾರತ ತಂಡದ ಮಾಜಿ ಕ್ರಿಕೇಟಿಗ ಶಿಖರ್ ಧವನ್ ಶನಿವಾರ ದೆಹಲಿ ಎನ್ಸಿಆರ್ ನಲ್ಲಿ ತಮ್ಮ ದೀರ್ಘಕಾಲದ ಗೆಳತಿ ಸೋಫಿ ಶೈನ್ ಜೊತೆಗೆ ಹಸೆಮಣೆ ಏರಿದ್ದಾರೆ.

ಈ ಜೋಡಿ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. 2025 ರಲ್ಲಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದ್ದರು. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯದ ಸಮಯದಲ್ಲಿ ಧವನ್ ಮತ್ತು ಶೈನ್ ಮೊದಲು ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಕ್ಕೂ ಮೊದಲು, ಧವನ್ ಗುರುವಾರ ತಮ್ಮ ನಿಶ್ಚಿತ ವಧು ಸೋಫಿ ಶೈನ್ ಜೊತೆಗಿನ ಸಂಗೀತ ರಾತ್ರಿಯ ಫೋಟೋಗಳನ್ನು ಹಂಚಿಕೊಂಡಿದ್ದರು.
ಸೋಫಿ ಅವರು ಪ್ರಾಡಕ್ಟ್ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಲಿಮೆರಿಕ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಪದವಿ ಪಡೆದಿದ್ದಾರೆ.
ಶಿಖರ್ ಧವನ್ ಈ ಹಿಂದೆ ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ 11 ವರ್ಷದ ಜೋರಾವರ್ ಧವನ್ ಎಂಬ ಮಗನಿದ್ದಾನೆ. ಆದರೆ ಇವರಿಬ್ಬರು 2023 ರಲ್ಲಿ ವಿಚ್ಛೇದನ ಪಡೆದರು.