ಮುಂಬೈ, ಮಾ. 21 (DaijiworldNews/AA): ಮಾರ್ಚ್ 28ರಿಂದ ಐಪಿಎಲ್ 2026 ಆರಂಭವಾಗಲಿದ್ದು, ಇದರ ಉದ್ಘಾಟನಾ ಪಂದ್ಯವು ಆರ್ಸಿಬಿ ಹಾಗೂ ಎಸ್ಆರ್ಹೆಚ್ ನಡುವೆ ನಡೆಯಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದ್ದು, ಸಹ ಆಟಗಾರರಿಗೆ ವಿರಾಟ್ ಕೊಹ್ಲಿ ಕಿವಿಮಾತು ಹೇಳಿದ್ದಾರೆ.

"ಕಳೆದ 2-3 ಸೀಸನ್ಗಳಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಕಳೆದ ವರ್ಷ ಸಾಧನೆ ಮಾಡಿದ್ದೇವೆ. ಆದರೆ ಈಗ ಇನ್ನಷ್ಟು ಕಷ್ಟವಾಗಲಿದೆ. ಇತರ ತಂಡಗಳು ನಮ್ಮ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಆಟ ಆಡಲಿವೆ" ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
"ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಪ್ರತಿಯೊಂದು ಸೆಷನ್ಗೂ 120 ಪರ್ಸೆಂಟ್ ಕೊಡುಗೆ ನೀಡಬೇಕು. ಈ ಎರಡೂವರೆ ತಿಂಗಳು ನಮ್ಮ ಪಾಲಿಗೆ ಬಹಳ ಮುಖ್ಯ" ಎಂದಿದ್ದಾರೆ.
ಆರ್ಸಿಬಿ ಕಳೆದ ಸೀಸನ್ನಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಇದೀಗ ಈ ಬಾರಿ ಆರ್ಸಿಬಿ ಚಾಂಪಿಯನ್ ತಂಡವಾಗಿ ಕಣಕ್ಕಿಳಿಯುತ್ತಿರುವುದರಿಂದ ಒತ್ತಡ ಹೆಚ್ಚಾಗಲಿದೆ. ಈ ಕಾರಣಕ್ಕೇ ಸಹ ಆಟಗಾರರನ್ನ ಕೊಹ್ಲಿ ಹುರಿದುಂಬಿಸಿದ್ದಾರೆ.