ಮುಂಬೈ, ಆ 23 (DaijiworldNews/SM): ರವಿಶಾಸ್ತ್ರಿ ಟೀಂ ಇಂಡಿಯಾದ ರೋಚ್ ಆಗಿ ಪುನರಾಯ್ಕೆಗೊಂಡಿದ್ದಾರೆ. ಆದರೆ, ಕೋಚ್ ಆಯ್ಕೆ ಸಂದರ್ಭ ಮುಂಚೂಣಿಯಲ್ಲಿದ್ದ ನ್ಯೂಜಿಲ್ಯಾಂಡ್ ಕ್ರಿಕೆಟ್ನ ಮಾಜಿ ಕೋಚ್ ಮೈಕ್ ಹೆಸ್ಸನ್ ಅವರಿಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಆದರೆ ಇದೀಗ ಅವರಿಗೆ ಭಾರತದೊಳಗೆ ಹೊಸ ಅವಕಾಶವೊಂದು ಲಭಿಸಿದೆ.
ಆರ್ ಸಿಬಿ ತಂಡ ಮೈಕ್ ಹೆಸ್ಸನ್ ಅವರಿಗೆ ಮಣೆ ಹಾಕಿದೆ. ಆರ್ಸಿಬಿ ತಂಡ ಮೈಕ್ ಹೆಸ್ಸನ್ ಅವರಿಗೆ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕನ್ನಾಗಿ ಆಯ್ಕೆ ಮಾಡಿದೆ. ಜತೆಗೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಸೈಮನ್ ಕಟಿಚ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕಗೊಳಿಸಿದೆ.
ಆಗಸ್ಟ್ 16ರಂದು ನಡೆದ ಸಂದರ್ಶನದಲ್ಲಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ, ಮೈಕ್ ಹೆಸ್ಸನ್ ಅವರ ಹೆಸರನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಅಂತಿಮಗೊಳಿಸಿತ್ತು. ಆದರೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಲಹೆ ಮೇರೆಗೆ ಇನ್ನೊಂದು ಅವಧಿಗೆ ರವಿಶಾಸ್ತ್ರಿಯನ್ನೇ ತಂಡದ ಕೋಚ್ ಆಗಿ ಮರುನೇಮಕಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಆರ್ಸಿಬಿ ತಂಡ ಹೆಸ್ಸನ್ ಅವರಿಗೆ ಮಣೆ ಹಾಕಿದೆ.