ಬೆಂಗಳೂರು, ಮೇ. 21 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಹಂತ ತಲುಪಿದೆ. ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಪ್ಲೇಆಫ್ನಲ್ಲಿ ಮೊದಲ ಕ್ವಾಲಿಫೈಯರ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇದೀಗ ಆರ್ಸಿಬಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಪ್ಲೇಆಫ್ಗೂ ಮುನ್ನ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ತಂಡವನ್ನ ಕೂಡಿಕೊಳ್ಳಲಿದ್ದಾರೆ.

ಪ್ಲೇಆಫ್ ಪಂದ್ಯಕ್ಕೂ ಮುನ್ನ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಆರ್ಸಿಬಿಯನ್ನ ಕೂಡಿಕೊಳ್ಳಲಿದ್ದಾರೆ. ಈ ಮೂಲಕ ಆರ್ಸಿಬಿ ತಂಡದ ಬ್ಯಾಟಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ.
ಕಳೆದ ಏಪ್ರಿಲ್ 18 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸಾಲ್ಟ್ ಅವರ ಎಡಗೈ ಬೆರಳಿಗೆ ತೀವ್ರ ಪೆಟ್ಟಾಗಿತ್ತು. ಈ ಗಾಯದ ಕಾರಣ ಇಂಗ್ಲೆಂಡ್ಗೆ ತೆರಳಿದ್ದ ಅವರು, ಇದೀಗ ಸಂಪೂರ್ಣ ಫಿಟ್ ಆಗಿದ್ದು, ತಂಡವನ್ನ ಸೇರಲಿದ್ದಾರೆ. ಮೇ 26 ಕ್ಕೂ ಮುನ್ನ ಫಿಲ್ ಸಾಲ್ಟ್ ಆರ್ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಐಪಿಎಲ್ನ ಮೊದರ್ಲಾರ್ಧದಲ್ಲಿ 6 ಪಂದ್ಯಗಳನ್ನಾಡಿದ್ದ ಸಾಲ್ಟ್ 2 ಭರ್ಜರಿ ಅರ್ಧಶತಕಗಳೊಂದಿಗೆ 206 ರನ್ ಕಲೆಹಾಕಿದ್ದರು. ಇನ್ನು ಬ್ಯಾಟಿಂಗ್ ನಲ್ಲಿ ಅಷ್ಟೇ ಅಲ್ಲದೇ ಫೀಲ್ಡಿಂಗ್ನಲ್ಲೂ ಸಾಲ್ಟ್ ಉತ್ತಮ ಪ್ರದರ್ಶನ ನೀಡಿದ್ದರು.