ಮುಂಬೈ,ಮೇ. 25(DaijiworldNews/AK): 2026 ರ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿವೆ. 10 ತಂಡಗಳ ನಡುವಣ ಕದನದಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ 4 ತಂಡಗಳು ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ.

ದ್ವಿತೀಯ ಸುತ್ತು ಪ್ಲೇಆಫ್ ಸುತ್ತಿನಲ್ಲಿ ಒಟ್ಟು ನಾಲ್ಕು ಮ್ಯಾಚ್ಗಳು ನಡೆಯಲಿದೆ. ಮೊದಲು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದಾದ ಬಳಿಕ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಮ್ಯಾಚ್ನಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಹಾಗೆಯೇ ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದೊಡನೆ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲಿದೆ.
ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸುತ್ತದೆ. ಮೇ 31 ರಂದು ನಡೆಯಲಿರುವ ಫೈನಲ್ನಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ದ್ವಿತೀಯ ಕ್ವಾಲಿಫೈಯರ್ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಿ ಆಡಲಿದ್ದಾರೆ.
ಮೇ 26, ಮಂಗಳವಾರ (ಕ್ವಾಲಿಫೈಯರ್ 1): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯ ಎಚ್ಪಿಸಿಎ ಸ್ಟೇಡಿಯಂ, ಧರ್ಮಶಾಲಾದಲ್ಲಿ ನಡೆಯಲಿದೆ.
ಇನ್ನು ಮೇ 27, ಬುಧವಾರ (ಎಲಿಮಿನೇಟರ್): ಸನ್ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ಮುಲ್ಲನ್ಪುರ್ (ನ್ಯೂ ಚಂಡೀಗಢ್)ನಲ್ಲಿ ನಡೆಯಲಿದೆ.
ಮೇ 29, ಶುಕ್ರವಾರ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂ, ಮುಲ್ಲನ್ಪುರ್ (ನ್ಯೂ ಚಂಡೀಗಢ್) ನಲ್ಲಿ (ಕ್ವಾಲಿಫೈಯರ್ 2): ಕ್ವಾಲಿಫೈಯರ್ 1 ರ ಸೋತ ತಂಡ vs ಎಲಿಮಿನೇಟರ್ ಪಂದ್ಯದ ಗೆದ್ದ ತಂಡ ನಡುವೆ ಮ್ಯಾಚ್ ನಡೆಯಲಿದೆ.
ಮೇ 31, ಭಾನುವಾರ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್ 1 ರ ಗೆದ್ದ ತಂಡ vs ಕ್ವಾಲಿಫೈಯರ್ 2 ರ ಗೆದ್ದ ತಂಡಗಳ ನಡುವೆ ಹಣಾಹಣಿ ಮ್ಯಾಚ್ ನಡಯಲಿದೆ.