ನವದೆಹಲಿ, ಆ 28 (DaijiworldNews/SM): ಸ್ವಿಝರ್ ಲ್ಯಾಂಡ್ ನ ಬಾಸೆಲ್ ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನವನ್ನು ಅರ್ಪಿಸುವ ಮೂಲಕ ದೇಶದ ಹಿರಿಮೆಗೆ ಪಿ.ವಿ. ಸಿಂಧು ಪಾತ್ರರಾಗಿದ್ದಾರೆ. ದೇಶದೆಲ್ಲೆಡೆ ಇವರ ಸಾಧನೆ ಪ್ರಶಂಸೆಗೆ ಕಾರಣವಾಗಿದೆ.
ಚಿನ್ನ ಗೆಲ್ಲುವ ಮೂಲಕ ಮಹಿಳಾ ಬ್ಯಾಡ್ಮಿಂಟನ್ ಲೋಕದ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದ ಪಿ.ವಿ. ಸಿಂಧು ಅವರು ಬಂಗಾರದೊಂದಿಗೆ ತಾಯ್ನಾಡಿಗೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಅಲ್ಲಿಂದ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಸಿಂಧು ಅವರು ದೇಶ ಮಾತ್ರವಲ್ಲದೆ ವಿಶ್ವ ಬ್ಯಾಡ್ಮಿಂಟನ್ ಲೋಕದ ಹೆಮ್ಮೆ ಎಂದು ಪ್ರಧಾನಿ ಮೋದಿ ಅವರು ಸಿಂಧು ಸಾಧನೆ ಬಗ್ಗೆ ಗುಣಗಾಣ ಮಾಡಿದರು.