ಜಮೈಕಾ, ಸೆ 01(DaijiworldNews/SM): ಭಾರತ ಹಾಗೂ ವಿಂಡೀಸ್ ವಿರುದ್ಧದ ಎರಡನೇ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಮೂರನೇ ದಿನ ಮೊದಲ ಇನ್ನಿಂಗ್ಸ್ ನಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿದ್ದಾರೆ.
ಮೂರನೇ ದಿನದ ಪಂದ್ಯದ ವೇಳೆ ವಿಂಡೀಸ್ ತಂಡಕ್ಕೆ ಭಾರತದ ಜಸ್ಪ್ರಿತ್ ಬುಮ್ರಾ ಶಾಕ್ ನೀಡಿದರು. ತಂಡದ ಮೊತ್ತ 9 ರನ್ ಇರುವಾಗ ಜಾನ್ ಕ್ಯಾಂಪ್ ಬೆಲ್ ಅವರನ್ನು ಫೆವೀಲಿಯನ್ ಗೆ ಅಟ್ಟಿದರು. ನಂತರ ಒಂಬತ್ತನೇ ಓವರ್ ಕೈಗೆತ್ತಿಕೊಂಡ ಬುಮ್ರಾ ವಿಂಡೀಸ್ ಪಾಲಿಗೆ ಸಿಂಹ ಸ್ವಪ್ನರಾದರು.
ಬುಮ್ರಾ ಅವರು ತಂಡದ ಮೊತ್ತ 13 ರನ್ ಇರುವಾಗ ಡೆರೆನ್ ಬ್ರಾವೊ(4), ಶಮರಹ್ ಬ್ರೂಕ್ಸ್ ಹಾಗೂ ರೋಸ್ಟನ್ ಚೇಸ್ ಅವರ ವಿಕೆಟ್ ಗಳನ್ನು ಶೂನ್ಯಕ್ಕೆ ಬಲಿ ಪಡೆದುಕೊಂಡರು. ಹಾಗೂ ಹ್ಯಾಟ್ರಿಕ್ ವಿಕೆಟ್ ಕಿತ್ತು ಸಂಭ್ರಮಿಸಿದರು. ಆ ಮೂಲಕ ವಿಂಡೀಸ್ ತಂಡವನ್ನು ಸಂಕಷ್ಟಕ್ಕೀಡು ಮಾಡಿದರು.