ಮುಂಬೈ, ಜೂ. 13 (DaijiworldNews/AA): ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದ ವೈಭವ್ ಸೂರ್ಯವಂಶಿ ಅವರ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ ಅವರು ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ವೈಭವ್ ಅವರ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ ಅವರು ಬಿಹಾರದ ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಅಶೀರ್ವಾದ್ ಅದ್ಭುತ ಶತಕ ಸಿಡಿಸಿದ್ದಾರೆ. ಬಿಹಾರದಲ್ಲಿ ಕ್ರಿಕೆಟ್ ಅಕಾಡೆಮಿ ತಾಜ್ಪುರ ಪರ ಆಡಿದ ಆಶೀರ್ವಾದ್ 87 ಎಸೆತಗಳಲ್ಲಿ 103 ರನ್ ಬಾರಿಸಿದ್ದಾರೆ.
118.39 ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ನಡೆಸಿರುವ ಆಶೀರ್ವಾದ್ 20 ಬೌಂಡರಿಗಳು ಮತ್ತು 1 ಸಿಕ್ಸರ್ ಸಿಡಿಸಿದ್ದಾರೆ. ಆಶೀರ್ವಾದ್ ಬ್ಯಾಟಿಂಗ್ ನೆರವಿನಿಂದ ತಂಡವು 29.5 ಓವರ್ಗಳಲ್ಲಿ 4 ವಿಕೆಟ್ ಪತನಕ್ಕೆ 234 ರನ್ ಗಳಿಸಲು ಸಾಧ್ಯವಾಯಿತು.
ತಮ್ಮ ಸಹೋದರ ಆಶೀರ್ವಾದ್ ಅವರ ಅಮೋಘ ಶತಕದ ಬೆನ್ನಲ್ಲೇ, ವೈಭವ್ ಸೂರ್ಯವಂಶಿ ಸಾಮಾಜಿಕ ಮಾಧ್ಯಮದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಅಭಿನಂದನೆಗಳು ಆಶೀರ್ವಾದ್ ಎಂದು ಅವರ ಫೋಟೊ ಶೇರ್ ಮಾಡಿದ್ದಾರೆ.