ಮುಂಬೈ, ಜೂ. 13 (DaijiworldNews/AK):10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್ಗೆ ಅದ್ಧೂರಿ ಚಾಲನೆ ದೊರೆತಿದೆ. ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ಶ್ರೀಲಂಕಾ ತಂಡವನ್ನು 87 ರನ್ಗಳಿಂದ ಮಣಿಸಿ ಗೆಲುವಿನ ಶುಭಾರಂಭ ಮಾಡಿದೆ.

ಇದೀಗ ಈ ಪಂದ್ಯಾವಳಿಯ ಹೈವೋಲ್ಟೇಜ್ ಕದನ ಭಾರತ ಹಾಗೂ ಪಾಕಿಸ್ತಾನದ ನಡುವೆ ಭಾನುವಾರದಂದು ಅಂದರೆ ಜೂನ್ 14 ರಂದು ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಸಕಲ ತಯಾರಿ ಮಾಡಿಕೊಂಡಿವೆ. ಈ ಲೀಗ್ನಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ.
ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ಮುಖಾಮುಖಿಯಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸಿದೆ. ಆದಾಗ್ಯೂ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಎಂದಿಗೂ ಟಿ20 ಸರಣಿಯನ್ನು ಆಡಿಲ್ಲ. ಆದರೆ ಈ ಎರಡೂ ತಂಡಗಳು ಐಸಿಸಿ ಟೂರ್ನಿಗಳು, ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್ ಅಥವಾ ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇಲ್ಲಿಯವರೆಗೆ, ಈ ಎರಡೂ ತಂಡಗಳು 16 ಪಂದ್ಯಗಳನ್ನು ಆಡಿದ್ದು, ಇವುಗಳಲ್ಲಿ ಭಾರತ 13 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ. ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಟಿ20 ವಿಶ್ವಕಪ್ ಪಂದ್ಯ ಜೂನ್ 14 ರಂದು ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಭಾರತ ಟಿ20 ವಿಶ್ವಕಪ್ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್.
ಪಾಕಿಸ್ತಾನ ಟಿ20 ವಿಶ್ವಕಪ್ ತಂಡ: ಫಾತಿಮಾ ಸನಾ (ನಾಯಕಿ), ಗುಲ್ ಫಿರೋಜಾ, ಆಯೇಶಾ ಜಾಫರ್, ಇರಾಮ್ ಜಾವೇದ್, ಐಮನ್ ಫಾತಿಮಾ, ಅಲಿಯಾ ರಿಯಾಜ್, ನತಾಲಿಯಾ ಪರ್ವೈಜ್, ಸೈರಾ ಜಬೀನ್, ಮುನೀಬಾ ಅಲಿ, ತುಬಾ ಹಸನ್, ರಮೀನ್ ಶಮೀಮ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಡಯಾನಾ ಬೇಗ್, ತಸ್ಮಿಯಾ ರುಬಾಬ್.