ನವದೆಹಲಿ, ಜೂ. 20 (DaijiworldNews/AA): ಭಾರತದ ಲೆಜೆಂಡರಿ ಆಲ್ರೌಂಡರ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರು 20ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಆರಂಭಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, 2027ರ ಐಪಿಎಲ್ ನಲ್ಲಿ ಯುವರಾಜ್ ಸಿಂಗ್ ಕೋಚಿಂಗ್ ನೀಡಲು ಸಜ್ಜಾಗುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ನ ಬ್ಯಾಟಿಂಗ್ ಕೋಚ್ ಆಗಿ ಯುವರಾಜ್ ಸಿಂಗ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ
ಇದರೊಂದಿಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಮರಳುವುದು ಬಹುತೇಕ ಖಚಿತವಾಗಿದೆ. ಗಂಗೂಲಿ ಅವರು ಯುವರಾಜ್ ಸಿಂಗ್ ಅವರನ್ನೂ ಡಗೌಟ್ಗೆ ಕರೆತರಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ.