ಲಂಡನ್, ಜೂ. 28 (DaijiworldNews/AK): ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಹಾಗೂ ಸ್ಟಾರ್ ಆಲ್ರೌಂಡರ್ ಬೆನ್ಸ್ಟೋಕ್ಸ್ ಸರಣಿ ಮಧ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.

ಟ್ರೆಂಟ್ ಬ್ರಿಡ್ಜ್ನಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ 3ನೇ ಮತ್ತು ನಿರ್ಣಾಯಕ ಟೆಸ್ಟ್ ಪಂದ್ಯವು ಅವರ ಕೊನೆಯ ಪಂದ್ಯವಾಗಲಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಡ್ರೆಸ್ಸಿಂಗ್ ರೂಮ್ನಲ್ಲಿ ಸ್ಟೋಕ್ಸ್ ಅವರು ಮಾತನಾಡಿದ ವೀಡಿಯೋ ಹಂಚಿಕೊಳ್ಳುವ ಮೂಲಕ ಅವರ ನಿವೃತ್ತಿಯನ್ನ ಖಚಿತಪಡಿಸಿದೆ.
ನಿರ್ಣಾಯಕ ಟೆಸ್ಟ್ ಪಂದ್ಯದ 4ನೇ ದಿನದಾಟ ಶುರುವಾಗುವ ಮೊದಲೇ 35 ವರ್ಷ ವಯಸ್ಸಿನ ಬೆನ್ಸ್ಟೋಕ್ಸ್ ತಮ್ಮ ತಂಡದ ಆಟಗಾರರಿಗೆ ನಿವೃತ್ತಿಯ ನಿರ್ಧಾರ ತಿಳಿಸಿದ್ದಾರೆ. ಇದರ ನಂತರ, ಇಂಗ್ಲೆಂಡ್ ತಂಡವು ಭಾವನಾತ್ಮಕ ಸಂದೇಶ ಹಂಚಿಕೊಂಡಿತು, ಸ್ಟೋಕ್ಸ್ ಅವರನ್ನು ತಂಡದ ಅತ್ಯಂತ ಸ್ಪೂರ್ತಿದಾಯಕ ನಾಯಕ ಮತ್ತು ಶ್ರೇಷ್ಠ ಆಟಗಾರ ಎಂದು ಬಣ್ಣಿಸಿತು.
ಬೆನ್ಸ್ಟೋಕ್ಸ್ . ಏಕದಿನ, ಟಿ20 ಕ್ರಿಕೆಟ್ನಲ್ಲೂ ಅವರ ಪಾರಮ್ಯಕ್ಕೆ ಎಲ್ಲೆಯೇ ಇರಲಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ 7,243 ರನ್ಗಳೊಂದಿಗೆ 251 ವಿಕೆಟ್, ಏಕದಿನ ಕ್ರಿಕೆಟ್ನಲ್ಲಿ 3,463 ರನ್ ಗಳಿಸಿ 74 ವಿಕೆಟ್ ಪಡೆದಿರುವ ಸ್ಟೋಕ್ಸ್, ಟಿ20 ಕ್ರಿಕೆಟ್ನಲ್ಲಿ 26 ವಿಕೆಟ್ ಪಡೆದು 585 ರನ್ ಗಳಿಸಿದ್ದಾರೆ.
2019 ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಇಂಗ್ಲೆಂಡ್ ತಂಡದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಆ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಟೋಕ್ಸ್ ಗಳಿಸಿದ ಅಜೇಯ 84 ರನ್ ತಂಡವನ್ನು ಸೂಪರ್ ಓವರ್ ಹಂತಕ್ಕೆ ಕೊಂಡೊಯ್ದಿತು. ಕೊನೆಗೆ ಇಂಗ್ಲೆಂಡ್ ತಂಡವು ಚೊಚ್ಚಲ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳಲೂ ಕಾರಣವಾಯಿತು. ಸಾಲದ್ದಕ್ಕೆ 2022 ರಲ್ಲಿ ಟಿ20 ವಿಶ್ವಕಪ್ ತಂದುಕೊಡುವಲ್ಲಿ ಯಶಸ್ವಿ ಪ್ರರ್ದಶನ ನೀಡಿದ್ದರು.
2016 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ಟೌನ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 258 ರನ್ (198 ಎಸೆತ, 11 ಸಿಕ್ಸ್, 30 ಬೌಂಡರಿ) ಸಿಡಿಸಿದ್ದರು. ಈ ಮೂಲಕ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದ್ದರು.