ನ್ಯೂಯಾರ್ಕ್, ಜು. 03 (DaijiworldNews/AA): 2026ರ ಫಿಫಾ ವಿಶ್ವಕಪ್ ಪೋರ್ಚುಗಲ್ನ ಸ್ಟಾರ್ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ ಅವರಿಗೆ ಕೊನೆಯ ಟೂರ್ನಿಯಾಗಬಹುದು ಎಂದು ರೊನಾಲ್ಡೊ ಸಹೋದರಿ ಕಟಿಯಾ ಅವೆರೋ ತಿಳಿಸಿದ್ದಾರೆ.

ಕ್ರೊಯೇಷಿಯಾ ವಿರುದ್ಧ ಪೋರ್ಚುಗಲ್ನ 32 ನೇ ಸುತ್ತಿನ ಹಣಾಹಣಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರೊನಾಲ್ಡೊ ತನ್ನ ಅಂತರರಾಷ್ಟ್ರೀಯ ಪ್ರಯಾಣದ ಅಂತ್ಯವನ್ನು ಸಮೀಪಿಸುತ್ತಿದ್ದಾರೆ ಎಂಬುದು ನನ್ನ ನಂಬಿಕೆ. ನನಗಿರುವ ಮಾಹಿತಿಯ ಪ್ರಕಾರ ರೊನಾಲ್ಡೊ ವಿದಾಯ ಹೇಳಬಹುದು. ಅದನ್ನು ನೀವು ಆನಂದಿಸಿ. ಅವರು ಇಂದು ವಿದಾಯ ಹೇಳುತ್ತಿಲ್ಲ, ಆದರೆ ಶೀಘ್ರದಲ್ಲೇ ಹೇಳುತ್ತಾರೆ" ಎಂದು ಹೇಳಿದ್ದಾರೆ.
1,000 ವೃತ್ತಿಜೀವನದ ಗೋಲುಗಳ ಮೈಲಿಗಲ್ಲನ್ನು ತಲುಪಿದ ನಂತರ ರೊನಾಲ್ಡೊ ನಿವೃತ್ತರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ರಾಷ್ಟ್ರೀಯ ತಂಡದ ಬಗ್ಗೆ ಮಾತನಾಡುತ್ತಿದ್ದೇನೆ. ವಿಶ್ವಾಸಾರ್ಹ ಮೂಲದಿಂದ ನನಗೆ ದೊರೆತ ಮಾಹಿತಿಯ ಪ್ರಕಾರ, ಇದು ಅವರ ಕೊನೆಯ ಪಂದ್ಯ ಎಂದು ನಾನು ನಂಬುತ್ತೇನೆ" ಎಂದಿದ್ದಾರೆ.