ಗ್ಲ್ಯಾಸ್ಗೋ, ಜು. 26 (DaijiworldNews/AA): ಕಾಮನ್ವೆಲ್ತ್ ಗೇಮ್ಸ್ನ ಪುರುಷರ 60 ಕೆಜಿ ತೂಕದ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಚನಂಬಮ್ ಋಷಿಕಾಂತ್ ಸಿಂಗ್ ಬೆಳ್ಳಿ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ.

ಸ್ನ್ಯಾಚ್ ವಿಭಾಗದಲ್ಲಿ ಮಣಿಪುರದ ಇಂಫಾಲ್ ಮೂಲದ ಋಷಿಕಾಂತ್ ಸಿಂಗ್ 116 ಕೆಜಿ ತೂಕವನ್ನು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಎತ್ತಿದರು. ತಮ್ಮ ಎರಡನೇ ಪ್ರಯತ್ನದಲ್ಲಿ 119 ಕೆಜಿ ಎತ್ತಿದ ಅವರು, ಮೂರನೇ ಯಶಸ್ವಿ ಪ್ರಯತ್ನದಲ್ಲಿ 121 ಕೆಜಿ ತೂಕವನ್ನು ಎತ್ತಿದರು. ಅವರು 121 ಕೆಜಿ ತೂಕ ಎತ್ತುವ ಮೂಲಕ ಹೊಸ ಕಾಮನ್ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ.
ಈ 121 ಕೆಜಿ ತೂಕದ ಎತ್ತುವಿಕೆಯು ಋಷಿಕಾಂತ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಜೊತೆಗೆ ಅವರು ನೂತನ ಕಾಮನ್ವೆಲ್ತ್ ಗೇಮ್ಸ್ ಸ್ನ್ಯಾಚ್ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.