ಮುಂಬೈ, ಜು. 27 (DaijiworldNews/AA): ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನಹರಿಸುವಂತೆ ಯುವ ದಾಂಡಿಗ ವೈಭವ್ ಸೂರ್ಯವಂಶಿಗೆ ಟೀಮ್ ಇಂಡಿಯಾದ ಹಂಗಾಮಿ ಹೆಡ್ ಕೋಚ್ ವಿವಿಎಸ್ ಲಕ್ಷ್ಮಣ್ ಅವರು ಸೂಚನೆ ನೀಡಿದ್ದಾರೆ.

ಝಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯ ಮುಗಿದ ಬಳಿಕ ಮಾತನಾಡಿದ ಕೋಚ್ ಲಕ್ಷ್ಮಣ್, "15 ವರ್ಷದ ಈ ಯುವ ಪ್ರತಿಭೆಯ ಪಕ್ವತೆ ಮತ್ತು ಪಂದ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ಶ್ಲಾಘಿಸಿದರು. ಆದಾಗ್ಯೂ, ಭವಿಷ್ಯದಲ್ಲಿ ಸುದೀರ್ಘ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿಯಬೇಕಾದರೆ ದೈಹಿಕ ದೃಢತೆ ಮುಖ್ಯವಾಗಿದೆ" ಎಂದು ತಿಳಿಸಿದರು.
"ವೈಭವ್ ಸೂರ್ಯವಂಶಿ ತುಂಬಾ ಕಿರಿಯ ಆಟಗಾರ. ಅವರು ತಮ್ಮ ಆಟವನ್ನು ಇನ್ ಆಂಡ್ ಔಟ್ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ಆದರೆ, ಅವರು ಪ್ರಮುಖವಾಗಿ ಗಮನ ಹರಿಸಬೇಕಾದ ಮತ್ತು ಸುಧಾರಿಸಿಕೊಳ್ಳಬೇಕಾದ ಏಕೈಕ ಕ್ಷೇತ್ರವೆಂದರೆ ಅವರ ಒಟ್ಟಾರೆ ಫಿಟ್ನೆಸ್" ಎಂದು ಹೇಳಿದ್ದಾರೆ.
"ಮೂರನೇ ಪಂದ್ಯದ ವೇಳೆ ವೈಭವ್ ಸಣ್ಣದಾಗಿ ಗಾಯಗೊಂಡಿದ್ದರೂ, ಮೈದಾನದಿಂದ ಹೊರಹೋಗಲು ನಿರಾಕರಿಸಿ, ತಂಡಕ್ಕಾಗಿ ಬ್ಯಾಟಿಂಗ್ ಮುಂದುವರಿಸಲು ಬಯಸಿದ್ದರು. ಕೊನೆಗೆ ತಂಡದ ಫಿಸಿಯೋ ಮೈದಾನಕ್ಕೆ ಬಂದು ಹಸ್ತಕ್ಷೇಪ ಮಾಡುವವರೆಗೂ ಅವರು ಮೈದಾನದಲ್ಲೇ ಇದ್ದರು. ಇಂತಹ ಛಲ ಒಳ್ಳೆಯದೇ. ಆದರೆ ಸುದೀರ್ಘ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಉಳಿಯಬೇಕಾದರೆ ದೈಹಿಕ ದೃಢತೆ ಕೂಡ ಅಷ್ಟೇ ಮುಖ್ಯ. ಹೀಗಾಗಿ ವೈಭವ್ ಸೂರ್ಯವಂಶಿ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ" ಎಂದರು.