ಗ್ಲಾಸ್ಗೊ, ಆ. 01 (DaijiworldNews/AA): ಸ್ಕಾಟ್ಲ್ಯಾಂಡ್ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ನ ಪುರುಷರ ಜಾವೆಲಿನ್ ಥ್ರೋ ಫೈನಲ್ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು, ಯಶ್ ವೀರ್ ಸಿಂಗ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ಎರಡು ಪದಕಗಳು ಒಲಿದಿದೆ.

ಗ್ಲ್ಯಾಸ್ಗೋನ ಸ್ಕಾಟ್ಸ್ಟೌನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದ ವೇಳೆ, ತೀವ್ರ ಚಳಿ ಮತ್ತು ವೇಗವಾಗಿ ಗಾಳಿ ಬೀಸುತ್ತಿತ್ತು. ಇದರ ನಡುವೆ ಕಣಕ್ಕಿಳಿದ ನೀರಜ್ ಚೋಪ್ರಾ, ತಮ್ಮ ಎರಡನೇ ಯತ್ನದಲ್ಲಿ 85.83 ಮೀಟರ್ ದೂರ ಜಾವೆಲಿನ್ ಎಸೆದು ಬೆಳ್ಳಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ಶ್ರೀಲಂಕಾದ ರುಮೇಶ್ ತರಂಗ ಪತಿರಾ ಅವರು 89.75 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇನ್ನು ಭಾರತದ ಯಶ್ ವೀರ್ ಸಿಂಗ್ 85.41 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದರು.