ಗ್ಲಾಸ್ಗೋ,ಆ. 01 (DaijiworldNews/AK): 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪ್ಯಾರಾ ಅಥ್ಲೀಟ್ಗಳು ಮತ್ತೊಮ್ಮೆ ಮಿಂಚಿದ್ದಾರೆ. ಪುರುಷರ ಶಾಟ್ಪುಟ್ ಈ57 ವಿಭಾಗದಲ್ಲಿ ಸೋಮನ್ ರಾಣಾ ಚಿನ್ನದ ಪದಕ ಗೆದ್ದರೆ, ಶುಭಮ್ ಜುಯಾಲ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಗ್ಲಾಸ್ಗೋದ ಸ್ಕಾಟ್ಸ್ಟೌನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ ಸೋಮನ್ ರಾಣಾ 13.40 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದರು. ಶುಭಮ್ ಜುಯಾಲ್ 13.28 ಮೀಟರ್ ದೂರ ಎಸೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಕ್ಯಾಮರೂನ್ನ ಸೆಡ್ರಿಕ್ ಕಂಚಿನ ಪದಕ ಪಡೆದರು.
ಸೋಮನ್ ಮತ್ತು ಶುಭಮ್ ಇಬ್ಬರೂ ಅತ್ಯುತ್ತಮ ಪ್ರದರ್ಶನ ನೀಡಿದರು. ಈ ಫಲಿತಾಂಶದೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದ ಈ57 ಶಾಟ್ಪುಟ್ ವಿಭಾಗದಲ್ಲಿ ಭಾರತ ಮೊದಲ ಬಾರಿಗೆ ಒಂದೇ ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದೆ.
ಇದರೊಂದಿಗೆ ಸೋಮನ್ ರಾಣಾ, ಕಾಮನ್ವೆಲ್ತ್ ಕ್ರೀಡಾಕೂಟದ ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.