ಮುಂಬೈ, ಆ. 07 (DaijiworldNews/AK):2026 ರ ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇಂದು ಪ್ರಕಟಿಸಿದೆ. ಅದರಂತೆ 10ನೇ ಆವೃತ್ತಿಯ ಈ ಪಂದ್ಯಾವಳಿ 2026 ರ ಆಗಸ್ಟ್ 28 ರಿಂದ ಪ್ರಾರಂಭವಾಗಲಿದೆ.

ಟೂರ್ನಮೆಂಟ್ನ ಎಲ್ಲಾ ಪಂದ್ಯಗಳು ಯುಎಇಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಟ್ಟು 8 ತಂಡಗಳು ಟೂರ್ನಮೆಂಟ್ನಲ್ಲಿ ಭಾಗವಹಿಸಲಿದ್ದು, ಈ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಎ ಗುಂಪಿನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಸೇರಿವೆ. ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ ಮತ್ತು ಇಂಡೋನೇಷ್ಯಾ ತಂಡಗಳು ಸೇರಿವೆ.
ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 5, 2026 ರಂದು ನಡೆಯಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 7.30 ಕ್ಕೆ ನಡೆಯಲಿದೆ.
ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ
28 ಆಗಸ್ಟ್ 2026: ಥೈಲ್ಯಾಂಡ್ vs ಹಾಂಗ್ ಕಾಂಗ್
29 ಆಗಸ್ಟ್ 2026: ಶ್ರೀಲಂಕಾ vs ಯುಎಇ
30 ಆಗಸ್ಟ್ 2026: ಭಾರತ vs ಥೈಲ್ಯಾಂಡ್,
31 ಆಗಸ್ಟ್ 2026: ಬಾಂಗ್ಲಾದೇಶ vs ಇಂಡೋನೇಷ್ಯಾ
1 ಸೆಪ್ಟೆಂಬರ್ 2026: ಪಾಕಿಸ್ತಾನ vs ಥೈಲ್ಯಾಂಡ್
2 ಸೆಪ್ಟೆಂಬರ್ 2026: ಶ್ರೀಲಂಕಾ vs ಇಂಡೋನೇಷ್ಯಾ
3 ಸೆಪ್ಟೆಂಬರ್ 2026: ಭಾರತ vs ಹಾಂಗ್ ಕಾಂಗ್
4 ಸೆಪ್ಟೆಂಬರ್ 2026: ಯುಎಇ vs ಇಂಡೋನೇಷ್ಯಾ
5 ಸೆಪ್ಟೆಂಬರ್ 2026: ಪಾಕಿಸ್ತಾನ vs ಭಾರತ
6 ಸೆಪ್ಟೆಂಬರ್ 2026: ಶ್ರೀಲಂಕಾ vs ಬಾಂಗ್ಲಾದೇಶ
7 ಸೆಪ್ಟೆಂಬರ್ 2026: ಪಾಕಿಸ್ತಾನ vs ಹಾಂಗ್ ಕಾಂಗ್
8 ಸೆಪ್ಟೆಂಬರ್ 2026: ಬಾಂಗ್ಲಾದೇಶ vs ಯುಎಇ