ದೋಹಾ, ಸೆ 11 (DaijiworldNews/SM): ಫಿಫಾ ವಿಶ್ವಕಪ್ ನಲ್ಲಿ ಸ್ಪರ್ಧಿಸಲು ಭಾರತ ಪೈಪೋಟಿ ನಡೆಸುತ್ತಿದ್ದು, ಅರ್ಹತಾ ಪಂದ್ಯ ನಡೆಯುತ್ತಿದೆ. ಕತಾರ್ ವಿರುದ್ಧದ ೨ನೇ ಅರ್ಹತ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಉತ್ತಮ ಪೈಪೋಟಿ ನೀಡಿದ ಹಿನ್ನೆಲೆಯಲ್ಲಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.
ಟೀಂ ಇಂಡಿಯಾದ ಪರವಾಗಿ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಅವರು ಉತ್ತಮ ಪ್ರದರ್ಶನ ತೋರಿದರು. ಅವರ ರಕ್ಷಣಾತ್ಮಕ ಗೋಲ್ ಕೀಪಿಂಗ್ ನಿಂದಾಗಿ ಎದುರಾಳಿ ಕತಾರ್ ತಂಡಕ್ಕೆ ಒಂದೇ ಒಂದು ಅಂಕಗಳಿಸಲು ಅವಕಾಶ ನೀಡಲಿಲ್ಲ. ಪರಿಣಾಮವಾಗಿ 'ಇ' ಗುಂಪಿನ ಅಂಕಪಟ್ಟಿಯಲ್ಲಿ ಭಾರತ ಮೊದಲನೇ ಅಂಕ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿತ್ತು.
ಮಂಗಳವಾರ ತಡರಾತ್ರಿ ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಸಮಬಲದ ಹೋರಾಟ ನಡೆಸಿದ ಭಾರತ ಹಾಗೂ ಕತಾರ್ ತಂಡಗಳು ಯಾವುದೇ ಅಂಕಗಳಿಸಲಾಗದೆ ಪಂದ್ಯವನ್ನು ಡ್ರಾಗೊಳಿಸಿ ತೃಪ್ತಿಪಟ್ಟುಕೊಂಡವು.
ಅನಾರೋಗ್ಯದಿಂದ ಬಳಲುತ್ತಿದ್ದ ನಿಯಮಿತ ನಾಯಕ ಸುನೀಲ್ ಚೆಟ್ರಿ ಅನುಪಸ್ಥತಿಯಲ್ಲಿ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಂಡವನ್ನು ಮುನ್ನಡೆಸಿದ್ದರು. ಆರಂಭದಿಂದಲೂ ಗೇಲು ಭಾರಿಸಲು ಗುರುಪ್ರೀತ್ ಯಾವೊಂದು ಅವಕಾಶವನ್ನು ಕೂಡ ಎದುರಾಳಿ ತಂಡಕ್ಕೆ ನೀಡದೆ ಭರ್ಜರಿ ಪ್ರದರ್ಶನ ನೀಡಿದರು.