ನವದೆಹಲಿ, ಸೆ.16 (DaijiworldNews/AK): ಮುಂಬರುವ 2027ರಲ್ಲಿ ನಡೆಯುವ 5ನೇ ಆವೃತ್ತಿ ಮಹಿಳಾ ಪ್ರೀಮಿಯರ್ ಲೀಗ್ನ ವೇಳಾಪಟ್ಟಿ ಹಾಗೂ ಹರಾಜು ದಿನಾಂಕವನ್ನು ಡಬ್ಲೂಪಿಎಲ್ ಪ್ರಕಟಿಸಿದೆ.

ಈ ಕುರಿತು ಡಬ್ಲೂಪಿಎಲ್ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಸೀಸನ್ನ ದಿನಾಂಕ ಹಾಗೂ ಹರಾಜು ನಡೆಯುವ ದಿನಾಂಕದ ಬಗ್ಗೆ ತಿಳಿಸಿದೆ. ಹರಾಜು ಪ್ರಕ್ರಿಯೆ ಇದೇ ಅಕ್ಟೋಬರ್ 28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದ್ದು, 2027ರ ಜನವರಿ 14ರಿಂದ ಫೆಬ್ರವರಿ 7ರವರೆಗೆ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದೆ.
ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 28ರವರೆಗೆ ಗಡುವು ನೀಡಲಾಗಿದೆ.
ಇದಕ್ಕೂ ಮುನ್ನ 2026ರ ಸೀಸನ್ನಲ್ಲಿ ಸ್ಮೃತಿ ಮಂಧಾನನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ತಮ್ಮ ಎರಡನೇ ಡಬ್ಲೂಪಿಎಲ್ ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್ ಆಗಿತ್ತು. ಕಳೆದ ನಾಲ್ಕು ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ( ತಂಡಗಳು ತಲಾ ಎರೆಡೆರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.