ಕುಂದಾಪುರ, ಸೆ 19 (Daijiworld News/RD): ಕೆನಡಾದ ಸೇಂಟ್ ಜೋನ್ಸ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್ ಶಿಪ್ ಡೆಡ್ ಲಿಫ್ಟ್ ನಲ್ಲಿ ವಿಶ್ವನಾಥ ಗಾಣಿಗ ಹೊಸ ದಾಖಲೆ ಬರೆದಿದ್ದಾರೆ.
ಕುಂದಾಪುರ ತಾಲೂಕಿನ ದೇವಲ್ಕುಂದ ನಿವಾಸಿಯಾಗಿರುವ ವಿಶ್ವನಾಥ ಗಾಣಿಗ ಡೆಡ್ ಲಿಫ್ಟ್ನಲ್ಲಿ 327.5 ಕೆಜಿ ತೂಕವೆತ್ತಿ 2011ರಲ್ಲಿ ಇಂಗ್ಲೆಂಡಿನ ಸ್ಟೀಫನ್ ಮ್ಯಾನ್ಯುವೆಲ್ ನಿರ್ಮಿಸಿದ್ದ 315 ಕೆ.ಜಿ. ದಾಖಲೆಯನ್ನು ಮುರಿದು ಭಾರೀ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ, ಸ್ನ್ಯಾಚ್ನಲ್ಲಿ 295.1 ಕೆಜಿ, ಬೆಂಚ್ಪ್ರಸ್ನಲ್ಲಿ 180 ಕೆಜಿ ಭಾರವೆತ್ತಿ 2 ಬೆಳ್ಳಿ ಪದಕವನ್ನೂ ಗೆದ್ದರು. ಒಟ್ಟಾರೆ 802.5 ಕೆಜಿ ಸಾಧನೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.