ಮೊಹಾಲಿ, ಸೆ 19 (DaijiworldNews/SM): ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ ನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ. ದ.ಆಫ್ರಿಕಾ ವಿರುದ್ದದ ಎರಡನೇ ಪಂದ್ಯದ ಗೆಲುವಿನ ರುವಾರಿ ಎಣಿಸಿಕೊಂಡಿದ್ದಾರೆ. ಅದಕ್ಕೂ ಮುಂದುವರೆದು ಹೊಸತೊಂದು ದಾಖಲೆ ಬರೆದಿದ್ದಾರೆ.
ಮೊಹಾಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ನಾಯಕ ವಿರಾಟ್ ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದರು. ಅಲ್ಲದೆ ಅಮೋಘ ಇನ್ನಿಂಗ್ಸ್ ಮೂಲಕ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಪಂದ್ಯದ ಅಮೋಘ ಇನ್ನಿಂಗ್ಸ್ ಮೂಲಕ ಕೊಹ್ಲಿ ಟಿ20 ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 2440 ರನ್ ಗಳನ್ನು ಪೇರಿಸಿದಂತಾಗಿದೆ. ಆ ಮೂಲಕ ಟಿ-೨೦ಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್ ಮನ್ ಎಂಬ ಕೀರ್ತಿ ಕೊಹ್ಲಿಗೆ ಸಲ್ಲುತ್ತದೆ.
ಆ ಮೂಲಕ ಟಿ20 ಯಲ್ಲಿ ಗರಿಷ್ಛ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ ಆಟಗಾರ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದು, ರೋಹಿತ್ ಒಟ್ಟು 2434 ರನ್ ಗಳಿಸಿದ್ದಾರೆ. ಆ ಮೂಲಕ ಕೇವಲ 6 ರನ್ ಗಳ ಅಂತರದಲ್ಲಿ ಅಗ್ರಸ್ಥಾನದಿಂದ ವಂಚಿತರಾಗಿದ್ದಾರೆ.