ನವದೆಹಲಿ, ಅ 11 (Daijiworld News/MSP): ಐಸಿಸಿಯ ಮೊದಲ ಮಹಿಳಾ ರೆಫ್ರಿಯಾಗಿ ನೇಮಕಗೊಂಡ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರವಾದ ಮಾಜಿ ಭಾರತೀಯ ಮಹಿಳಾ ಕ್ರಿಕೆಟಿಗ ಜಿ.ಎಸ್.ಲಕ್ಷ್ಮಿ ಅವರು, ಅಕ್ಟೋಬರ್ 18 ರಿಂದ ಯುಎಇಯಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ 20 ವಿಶ್ವಕಪ್ ಕ್ವಾಲಿಫೈಯರ್ 2019 ರ ಲೀಗ್ ಹಂತದ ಪಂದ್ಯದ ರೆಫ್ರಿಯಾಗಲಿದ್ದಾರೆ. ಈ ಪಂದ್ಯವು ಒಮಾನ್ ಮತ್ತು ಯುಎಇ ನಡುವೆ ನಡೆಯಲಿದೆ.
ಜಿ.ಎಸ್.ಲಕ್ಷ್ಮೀ ಅವರು 51 ವರ್ಷದವರಾಗಿದ್ದು, 2008-09ರಲ್ಲಿ ನಡೆದ ದೇಶಿಯ ಮಹಿಳಾ ಕ್ರಿಕೆಟ್ನಲ್ಲಿ ಮ್ಯಾಚ್ ರೆಫ್ರಿಯಾಗಿದ್ದರು. ಅಷ್ಟೇ ಅಲ್ಲದೆ ಜಿ.ಎಸ್.ಲಕ್ಷ್ಮೀ ಅವರು ಮಹಿಳೆಯರ ಮೂರು ಏಕದಿನ ಪಂದ್ಯ ಹಾಗೂ ಮಹಿಳಾ ಟಿ-20 ಪಂದ್ಯದಲ್ಲಿ ರೆಫ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು," ನನ್ನ ಸಾಧನೆಯ ಬಗ್ಗೆ ನಿಜವಾಗಿಯೂ ಹೆಮ್ಮೆಯಿದೆ, ಮಾತ್ರವಲ್ಲದೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯೂ ನನ್ನನ್ನು ಪ್ರೋತ್ಸಾಹಿಸಿ, ನನ್ನನ್ನು ರೆಫ್ರಿಯಾಗಿಲು ನಾಮನಿರ್ದೇಶನ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಬಿಸಿಸಿಐ ಈ ನಿರ್ಧಾರ ನನ್ನಂತಹ ಅನೇಕ ಮಹಿಳೆಯರಿಗೆ ಮಾರ್ಗಗಳನ್ನು ತೆರೆಯುವುದು ಖಚಿತ,ಯಲಿದೆ. ಎಲ್ಲಾ ಮಾಜಿ ಕ್ರಿಕೆಟಿಗರಿಗಳಿಗೂ, ನಿವೃತ್ತಿಯ ನಂತರದ ಜೀವನವಿದೆ ಎಂಬುದಕ್ಕೆ ನಾನೇ ಸೂಕ್ತ ನಿದರ್ಶನ" ಎಂದರು.