ನವದೆಹಲಿ, ಅ 15 (DaijiworldNews/SM): ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನಾಳಿದ್ದ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಬಿಸಿಸಿಐಗೆ ಅಧ್ಯಕ್ಷರಾಗಲಿದ್ದಾರೆ. ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಕೆಲವೊಂದು ಅನಿರೀಕ್ಷಿತ ಬೆಳವನಿಗೆಯ ಬಳಿಕ ಗಂಗೂಲಿಯವರನ್ನು ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಆಯ್ಕೆಯಾಗುತ್ತಿದ್ದಾರೆ. ಅಕ್ಟೋಬರ್ 13ರ ರಾತ್ರಿ ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದು, ಸೋಮವಾರದಂದು ಗಂಗೂಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಸೋಮವಾರದಂದೇ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿತ್ತು.
ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕರ್ನಾಟಕದ ಮಾಜಿ ಆಟಗಾರ ಬೃಜೇಶ್ ಪಾಟೀಲ್ ಸ್ಪರ್ಧಾ ಕಣದಲ್ಲಿ ಏಕೈಕ ವ್ಯಕ್ತಿಯಾಗಿದ್ದರು. ಬಳಿಕ ಅವರು ಕಣದಿಂದ ಹಿಂದಕ್ಕೆ ಸರಿದಿದ್ದು, ಸೌರವ್ ಗಂಗೂಲಿಯವರು ನಾಮಪತ್ರ ಸಲ್ಲಿಸಿದ್ದಾರೆ.
ಬೃಜೇಶ್ ಹಾಗೂ ಸೌರವ್ ಗಂಗೂಲಿ ರವಿವಾರದಂದು ಮಹತ್ವದ ಸಭೆ ನಡೆಸಿದ್ದು, ಇದರಲ್ಲಿ ನಾಮಪತ್ರ ಹಿಂಪಡೆಯುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.