ಇಂಧೋರ್, ನ 15(Daijiworld News/MB) : ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಬಾರಿಸಿ ಅತೀ ಕಡಿಮೆ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ ಎರಡನೇ ವಿಶ್ವದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದು ಮಯಾಂಕ್ ನ ಎರಡನೆ ದ್ವಿಶತಕವಾಗಿದೆ.
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾ ದೇಶದ ನಡುವೆ ನಡೆಯುವ ಟೆಸ್ಟ್ ಪಂದ್ಯದಲ್ಲಿ 302 ಎಸೆತದಲ್ಲಿ ತಮ್ಮ ದ್ವಿಶತಕ ಪೂರೈಸಿದ ಮಯಾಂಕ್ ಭರ್ಜರಿ ಐದು ಸಿಕ್ಸರ್ ಬಾರಿಸಿದ್ದಾರೆ. ಅಗರ್ವಾಲ್ ಈ ಇನ್ನಿಂಗ್ಸ್ ನಲ್ಲಿ ಒಟ್ಟು 25 ಬೌಂಡರಿಗಳನ್ನು ಬಾರಿಸಿದ್ದಾರೆ. 243 ರನ್ ಗಳಿಸಿದ್ದ ಮಯಾಂಕ್ ದೊಡ್ಡ ಹೊಡೆತಕ್ಕೆ ಮುಂದಾಗಿ 250 ರನ್ ಗಳಿಸಲು ಏಳು ರನ್ ಅಂತರದಲ್ಲಿ ಇರುವಾಗ ಔಟ್ ಆಗಿದ್ದಾರೆ.
ಆಟದ ಆರಂಭದಲ್ಲೇ ಚೇತೇಶ್ವರ ಪೂಜಾರ (54) ಹಾಗೂ ವಿರಾಟ್ ಕೊಹ್ಲಿ (0) ವಿಕೆಟ್ಗಳು ನಷ್ಟವಾದರೂ ಕರ್ನಾಟಕದ ಮಯಾಂಕ್ ಅಗರ್ವಾಲ್ ಹಾಗೂ ಅಜಿಂಕ್ಯ ರಹಾನೆ ಮಹತ್ವದ ಜೊತೆಯಾಟದ ಮೂಲಕ ಭಾರತ ತಂಡ ಬೃಹತ್ ಮುನ್ನಡೆ ಪಡೆಯುವಲ್ಲಿ ನೆರವಾಗಿದ್ದಾರೆ.
ಮಯಾಂಕ್ ಶತಕದ ವೇಳೆ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿದೆ. ರಹಾನೆ 42 ರನ್ ಗಳಿಸಿ ಆಟವಾಡುತ್ತಿದ್ದರು.
172 ಎಸೆತಗಳನ್ನು ಎದುರಿಸಿದ ರಹಾನೆ ಒಂಬತ್ತು ಬೌಂಡರಿಗಳಿಂದ 86 ರನ್ ಗಳಿಸಿದ್ದು ಶತಕಕ್ಕೆ 14 ರನ್ನ್ ಇರುವಾಗ ಔಟ್ ಆಗಿ ಶತಕ ಪಡೆಯುವಲ್ಲಿ ಎಡವಿದ್ದಾರೆ.
ಮಯಾಂಕ್ 12 ಇನ್ನಿಂಗ್ಸ್ ನಲ್ಲಿ ಎರಡನೇ ದ್ವಿಶತಕ ಬಾರಿಸಿದರೆ. ಮೊದಲ ಸ್ಥಾನ ವಿನೋದ್ ಕಾಂಬ್ಳಿಗೆ ಸೇರುತ್ತದೆ.