ಸೂರತ್: ನ 30 (DaijiworldNews/SM): ಸೂರತ್ ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಹರಿಯಾಣದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ. ಆ ಮೂಲಕ ಕರ್ನಾಟಕ ತಂಡ ಫೈನಲ್ ಗೆ ಲಗ್ಗ್ಗೆ ಇಟ್ಟಿದೆ.
ಅಂತಿಮ ನಾಲ್ಕರ ಘಟ್ಟದಲ್ಲಿ ಕರ್ನಾಟಕ ತಂಡ ಹರಿಯಾಣ ತಂಡದ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಕರ್ನಾಟಕ ತಂಡಕ್ಕೆ ಗೆಲ್ಲಲು ಹರಿಯಾಣ 195ರನ್ಗಳ ಗುರಿ ನೀಡಿತ್ತು. ಈ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಕರ್ನಾಟಕ 15 ಓವರ್ಗಳಲ್ಲೇ ಗೆಲುವಿನ ನಗೆ ಚೆಲ್ಲಿತು.
ಕರ್ನಾಟಕದ ಪರ ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಕೆ.ಎಲ್. ರಾಹುಲ್ ಭರ್ಜರಿ ಆರಂಭ ನೀಡಿದರು. ಹರಿಯಾಣ ಬೌಲರ್ಗಳನ್ನು ಮನಬಂದಂತೆ ಚಚ್ಚಿದರು. ಈ ಜೋಡಿ 125ರನ್ ಗಳ ಜೊತೆಯಾಟವಾಡಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ರಾಹುಲ್ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್ಗಳ ನೆರವಿನಿಂದ 66ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖರೆನಿಸಿಕೊಂಡರು.
ಇನ್ನು ಪ್ರಚಂಡ ಪಾರ್ಮ್ ಕಾಯ್ದುಕೊಂಡಿರುವ ದೇವದತ್ತ ಪಡಿಕ್ಕಲ್ 47 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 87 ರನ್ ಗಳಿಸಿ ಸಿಡಿಸಿದರು.
ಅಂತಿಮವಾಗಿ ಕರ್ನಾಟಕ ತಂಡ ಎಂಟು ವಿಕೆಟ್ ಗಳ ಅಂತರಗೆ ಗೆಲುವು ದಾಖಲಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.