ಕೊಲಂಬೋ, ನ 30 (Daijiworld News/MB) : ಶ್ರೀಲಂಕಾ ಕ್ರಿಕೆಟ್ ತಂಡದ ಕೋಚ್ ಆಗಿರುವ ಹಾಗೆಯೇ ಮಾಜಿ ಕ್ರಿಕೆಟ್ ಆಟಗಾರನಾಗಿದ್ದ ಮುತ್ತಯ್ಯ ಮುರಳೀಧರನ್ ಅವರು ಶ್ರೀಲಂಕಾ ಉತ್ತರ ಪ್ರಾಂತ್ಯದ ಗವರ್ನರ್ ಆಗಲಿದ್ದಾರೆ ಎಂದು ವರದಿಯಾಗಿದೆ.
ಅಧ್ಯಕ್ಷ ಗೊಟಬಯಾ ರಾಜಪಕ್ಸ ಅವರು ಶ್ರೀಲಂಕಾ ಉತ್ತರ ಪ್ರಾಂತ್ಯದ ಗವರ್ನರ್ ಪ್ರಾಂತ್ಯಕ್ಕೆ ರಾಜ್ಯಪಾಲರಾಗುವಂತೆ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗಿದೆ.
ಆದರೆ ಸ್ಥಳೀಯ ತಮಿಳರು ಮುರಳೀಧರನ್ ಗವರ್ನರ್ ಆಗುವುದನ್ನು ತೀವ್ರ ವಿರೋಧಿಸಿದ್ದು ಈ ನಡುವೆಯು ಅಧ್ಯಕ್ಷ ಗೋಟಾಬಯ ಮುತ್ತಯ್ಯ ಅವರಿಗೆ ಹುದ್ದೆ ಸ್ವೀಕಾರ ಮಾಡಲು ಆಹ್ವಾನಿ ನೀಡಿದ್ದಾರೆ.
2005ರಿಂದ 2015ರ ಅವಧಿಯಲ್ಲಿ ಮಹಿಂದಾ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷರಾಗಿದ್ದಾಗ, ಹಾಗೂ ಗೋಟಾಬಯ ರಾಜಪಕ್ಸ ರಕ್ಷಣಾ ಕಾರ್ಯದರ್ಶಿಯಾಗಿದ್ದಾಗ ತಮಿಳರ ಮೇಲೆ ನಿರಂತರ ದೌರ್ಜನ್ಯ ನಡೆದ ಆರೋಪವಿದ್ದು ತಮಿಳಿಗರ ಆತ್ಮರಕ್ಷಣಾ ಹೋರಾಟವನ್ನು ರಾಜಪಕ್ಸ ಕುಟುಂಬ ಹತ್ತಿಕ್ಕಿತೆನ್ನಲಾಗಿದೆ. ಆದರೆ ಶ್ರೀಲಂಕಾ ತಮಿಳರ ಮೇಲೆ ಯಾವುದೇ ರೀತಿಯ ಅನ್ಯಾಯ ನಡೆದಿಲ್ಲ ಎಂದು ಮುತ್ತಯ್ಯ ಮುರಳೀಧರನ್ ಅವರು ಹೇಳಿಕೆ ನೀಡಿದ್ದು ತಮಿಳರು ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆ ಕಾರಣದಿಂದಲ್ಲೇ ಈಗ ಮುರಳೀಧರನ್ರವರು ರಾಜ್ಯಪಾಲರಾಗುವುದನ್ನು ವಿರೋಧಿಸಲಾಗುತ್ತಿದೆ.
ಶ್ರೀಲಂಕಾದಲ್ಲಿ ನಡೆದ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೋಟಾಬಯ ರಾಜಪಕ್ಸ ಅವರು ಶೇ. 52.25ರಷ್ಟು ಮತ ಪಡೆದು ಭರ್ಜರಿ ಗೆಲುವು ಸಾಧಿಸಿದ್ದು ಸಜಿತ್ ಪ್ರೇಮದಾಸರವರು ಶೇ. 41.99 ಮತ ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಕೇವಲ ಶೇ. 3.16 ಮಾತ್ರ ಮೂರನೇ ಸ್ಥಾನ ಪಡೆದ ಅನುರಾ ಕುಮಾರ ಡಿಸ್ಸನಾಯಕ ಪಡೆದಿದ್ದರು. ಚುನಾವಣೆಯಲ್ಲಿ ಒಟ್ಟು 33 ಅಭ್ಯರ್ಥಿಗಳಿದ್ದು ಈ ಮೂವರನ್ನು ಹೊರತುನ ಪಡಿಸಿ ಉಳಿದ ಯಾರು ಕೂಡಾ ಒಂದು ಪ್ರತಿಶತದಷ್ಟು ಮತವನ್ನೂ ಪಡೆಯಲಿಲ್ಲ.