ಅಡಿಲೇಡ್, ಡಿ 2 (DaijiworldNews/SM): ಜಾಗತಿಕ ಕ್ರಿಕೆಟ್ ನಲ್ಲಿ ಹತ್ತು ಹಲವು ದಾಖಲೆಗಳಿವೆ. ಇವುಗಳಲ್ಲಿ ಅಪರೂಪದ ದಾಖಲೆಗಳಲ್ಲಿ ಒಂದಾಗಿರುವ ಲಾರಾ ಅವರ ದಾಖಲೆಯನ್ನು ಟೀಂ ಇಂಡಿಯಾದ ಹುಟ್ ಮನ್ ರೋಹಿತ್ ಮುರಿಯುವ ಸಾಮಾರ್ಥ್ಯಹೊಂದಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ.
ಪ್ರಸ್ತುತ ಅಡಿಲೇಡ್ ನಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಸಾಲದ್ದಕ್ಕೆ ಆಸ್ಟ್ರೇಲಿಯಾ ತಂಡ ಬೃಹತ್ ಮೊತ್ತವನ್ನು ಕಲೆಹಾಕಿದೆ. ಡೇವಿಡ್ 335 ರನ್ಗಳಿಸಿದ್ದಾಗ ತಂಡದ ಮೊತ್ತ ಮೂಋ ವಿಕೆಟ್ ನಷ್ಟಕ್ಕೆ 589 ರನ್ ಆಗಿತ್ತು. ನಾಲ್ಕುನೂರು ರನ್ ಗಲ ಸನಿಹದಲ್ಲಿದ್ದರು.ಆದರೆ, ತಂಡದ ನಾಯಕ ಪಂದ್ಯವನ್ನು ಡಿಕ್ಲೇರ್ ಘೋಷಿಸಿದರು. ಇದರಿಂದಾಗಿ 400 ರನ್ ಗಳತ್ತ ಮುನ್ನುಗ್ಗುತ್ತಿದ್ದ ವಾರ್ನರ್ ಗೆ ಹಿನ್ನಡೆಯಾಗಿದೆ. ಹಾಗೂ ಸುಮಾರು 65 ರನ್ಗಳಿಂದ ಲಾರಾ ದಾಖಲೆ ಮುರಿಯುವ ಅವಕಾಶವನ್ನು ಕಳೆದುಕೊಂಡರು.
ಪಂದ್ಯದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಾಖಲೆಯೊಂದು ನಿರ್ಮಾಣವಾಗುವುದು ತಪ್ಪಿದೆ ಎಂದು ನನಗೆ ಬೇಸರವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಲಾರಾ ಅವರ ಹೆಸರಲ್ಲಿರುವ ಅಜೇಯ 400ರನ್ ದಾಖಲೆಯನ್ನು ಮುರಿಯಲು ಸಾಧ್ಯವಿದೆ. ಅದರಲ್ಲೂ ಭಾರತದ ಹಿಟ್ ಮನ್ ರೋಹಿತ್ ಈ ದಾಖಲೆ ಖಂಡಿತ ಮುರಿಯಲಿದ್ದಾರೆ ಎಂಡು ಅವರು ಭವಿಷ್ಯ ನುಡಿದಿದ್ದಾರೆ.
2004 ರಲ್ಲಿ ಲಾರಾ ಇಂಗ್ಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ ಔಟಾಗದೆ 400 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.