ನವದೆಹಲಿ, ಡಿ 20 (DaijiworldNews/SM): ಚೊಚ್ಚಲವಾಗಿ ಐಪಿಎಲ್ ಗೆಲ್ಲಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಾತರದಿಂದ ಕಾಯುತ್ತಿದೆ. ಇದೀಗ ಈ ತಂಡದ ನಾಯಕರಾಗಿ ಕನ್ನಡಿಗ ಹಾಗೂ ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಅವರನ್ನು ಆಯ್ಕೆ ಮಾಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಂತೆ ಐಪಿಎಲ್ ಚಾಂಪಿಯನ್ ಗೆಲ್ಲಲ್ಲು ಪಂಜಾಬ್ ತಂಡ ಕೂಡ ಕಾತರದಲ್ಲಿ ಕಾಯುತ್ತಿದೆ. ಈ ಬಾರಿ ತಂಡದ ನಾಯಕತ್ವವನ್ನು ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ನೀಡಿದೆ. ಆ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್ ಗೆಲ್ಲುವುದಕ್ಕೆ ಪಂಜಾಬ್ ತುದಿಗಾಲಲ್ಲಿ ನಿಂತಿದೆ.
ಈ ಬಗ್ಗೆ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅವರು ಸ್ಪಷ್ಟಪಡಿಸಿದ್ದಾರೆ. ಕೆಎಲ್ ರಾಹುಲ್ ಅವರನ್ನು ತಂಡದ ನಾಯಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಖುಷಿಯನ್ನುಂಟುಮಾಡಿದೆ. ಬ್ಯಾಟ್ಸ್ ಮನ್ ಆಗಿ ಮಾತ್ರವಲ್ಲದೆ ನಾಯಕನಾಗಿಯೂ ಅವರ ಸಾಮರ್ಥ್ಯವನ್ನು ಈ ಸಲದ ಐಪಿಎಲ್ ನಲ್ಲಿ ಅವರು ಪ್ರಸ್ತುತಪಡಿಸಲಿದ್ದಾರೆ. ಅವರು ನಮ್ಮೆಲ್ಲರ ಆಯ್ಕೆ ಎಂದು ಹೇಳಿದ್ದಾರೆ.
2018ರಲ್ಲಿ ಕೆಎಲ್ ರಾಹುಲ್ ಅವರನ್ನು ಪಂಜಾಬ್ ಫ್ರಾಂಚೈಸಿ 11 ಕೋಟಿ ರುಪಾಯಿಗಳಿಗೆ ಖರೀಧಿಸಿತ್ತು.