ದೋಹಾ, ನ.24 (DaijiworldNews/AA): ಭಾರತ ಎ ಮತ್ತು ಯುಎಇ ನಡುವೆ ನಡುವೆ ನಡೆದ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ 204 ರನ್ ಸಿಡಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಎಸಿಸಿ ಪುರುಷರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಮೆಂಟ್ ಮಂಗಳವಾರ ದೋಹಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಭಾರತ ಎ ತಂಡ ಕೇವಲ 14.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಜಯ ಸಾಧಿಸಿತು.
ದ್ವಿಶತಕದೊಂದಿಗೆ ಹಲವಾರು ವಿಶ್ವದಾಖಲೆ ಬರೆದ ವೈಭವ್
ಭಾರತ ಗಳಿಸಿದ ಒಟ್ಟು 254 ರನ್ಗಳಲ್ಲಿ ವೈಭವ್ ಒಬ್ಬರೇ 204 ರನ್ಗಳ ಕೊಡುಗೆ ನೀಡಿದ್ದಾರೆ. ಆರಂಭದಲ್ಲೇ ಸಿಕ್ಸರ್, ಫೋರ್ ಮೂಲಕ ಅಬ್ಬರಿಸಿದ ವೈಭವ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ, 28 ಎಸೆತಗಳಲ್ಲಿ ಶತಕ ಸಿಡಿಸಿ ಏಕದಿನ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕದ ದಾಖಲೆ ನಿರ್ಮಿಸಿದರು. ಇಷ್ಟಕ್ಕೆ ತಮ್ಮ ಆರ್ಭಟ ನಿಲ್ಲಿಸದ ವೈಭವ್ ಕೇವಲ 40 ಎಸೆತಗಳಲ್ಲಿ 150 ರನ್ ಸಿಡಿಸಿ 50 ಓವರ್ಗಳ ಕ್ರಿಕೆಟ್ನಲ್ಲಿ ಅತ್ಯಂತ ವೇಗದ 150 ರನ್ಗಳ ದಾಖಲೆ ತಮ್ಮದಾಗಿಸಿಕೊಂಡರು.
ಮುಂದುವರೆದು 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ವೈಭವ್, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ದ್ವಿಶತಕದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ವೈಭವ್ ಬರೋಬ್ಬರಿ 28 ಸಿಕ್ಸರ್ ಮತ್ತು 7 ಫೋರ್ನೊಂದಿಗೆ ಕೇವಲ 53 ಬಾಲ್ಗೆ 204 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು.