ಪೊಚೆಫ್ಸೋಮ್(ದಕ್ಷಿಣ ಆಫ್ರಿಕಾ), ಜ 09 (DaijiworldNews/SM): ಇದೇ ಮೊದಲ ಬಾರಿ ಫೈನಲ್ ಗೆ ಲಗ್ಗೆಯಿರಿಸಿದ್ದ ಬಾಂಗ್ಲಾದೇಶ ಅಂಡರ್-19 ಚೊಚ್ಚಲ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ. ಹಾಲಿ ಚಾಂಪಿಯನ್, ಪ್ರಸಕ್ತ ವಿಶ್ವಕಪ್ ನ ಫೇವರಿಟ್ ತಂಡವೆನಿಸಿದ್ದ ಭಾರತವನ್ನು ಮಣಿಸಿ ವಿಶ್ವಕಪ್ ಗೆ ಮುತ್ತಿಕ್ಕಿದೆ.
ರವಿವಾರ ಇಲ್ಲಿನ ಸೆನ್ವೆಸ್ ಪಾರ್ಕ್ ನಲ್ಲಿ ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ತಂಡ ತೀರಾ ಕಳಪೆ ಪ್ರದರ್ಶನ ನೀಡಿ, 47.2ಓವರ್ ಗಳಲ್ಲಿ 177ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯದ ಮಧ್ಯೆ ಮಳೆ ಸುರಿದ ಕಾರಣ ಬಾಂಗ್ಲಾಕ್ಕೆ 46 ಓವರ್ ಗಳಲ್ಲಿ 170ರನ್ ಗುರಿ ನಿಗದಿಪಡಿಸಲಾಯಿತು. ಅಂತಿಮವಾಗಿ ಬಾಂಗ್ಲಾ 42.1 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಚೊಚ್ಚಲ ವಿಶ್ವಕಪ್ ಜಯಿಸಿತು. ಕ್ರಿಕೆಟ್ ಚರಿತ್ರೆಯಲ್ಲೇ ಬಾಂಗ್ಲಾದೇಶ ವಿಶ್ವಕಪ್ ಗೆದ್ದ ಮೊದಲ ನಿದರ್ಶನ ಇದಾಗಿದೆ.