ವೆಲ್ಲಿಂಗ್ಟನ್, ಫೆ 19 (DaijiworldNews/SM): ಭಾರತ ಕ್ರಿಕೆಟ್ ಕಂಡಂತಹ ಶ್ರೇಷ್ಟ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ, ತಮ್ಮ ಶ್ರೇಷ್ಟ ಫಾರ್ಮ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಿರಂತರ ಪಂದ್ಯಗಳಿದ್ದರೂ ಅದಕ್ಕೆ ತಕ್ಕಂತೆ ಬಿಡುವನ್ನು ಮಾಡಿಕೊಂಡಾಗ ಎಲ್ಲಾ ಮಾದರಿಯ ಆಟಗಳಲ್ಲೂ ಫಾರ್ಮ್ ಉಳಿಸಿಕೊಳ್ಳಲು ಸಾಧ್ಯ ಎಂದಿದ್ದಾರೆ.
ಶುಕ್ರವಾರದಿಂದ ನ್ಯೂಜಿಲ್ಯಾಂಡ್ ವಿರುದ್ದ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಈ ಹಿನ್ನೆಲೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಬ್ಯೂಸಿ ಸಮಯದಲ್ಲಿ ಕಾಲಕ್ಕೆ ತಕ್ಕಂತೆ ಬಿಡುವನ್ನು ಮಾಡಿಕೊಂಡಲ್ಲಿ ಮುಂದಿನ ಎರಡು-ಮೂರು ವರ್ಷಗಳ ಕಾಲ ಇದೇ ಫಾರ್ಮ್ ಮುಂದುವರೆಸಲು ಸಾಧ್ಯ ಎಂದಿದ್ದಾರೆ.
ನಾನು ಕಳೆದ ಎಂಟು ಅಥವಾ ಒಂಬತ್ತು ವರ್ಷಗಳಿಂದ ಪ್ರಯಾಣ ಮತ್ತು ಅಭ್ಯಾಸದ ಅವಧಿಗಳು ಸೇರಿದಂತೆ ವರ್ಷದಲ್ಲಿ ಸುಮಾರು 300 ದಿನ ಕ್ರಿಕೆಟ್ ಆಡುತ್ತಿದ್ದೇನೆ. ಆದರೆ, ಪೂರ್ಣ ಸಮಯ ವಿನಿಮಯಿಸಿ ಕ್ರಿಕೆಟ್ ಆಡಲು ಅಸಾಧ್ಯ. ಅಂದುಕೊಂಡಷ್ಟು ಸುಲಭವಿಲ್ಲ ಎಂದಿದ್ದಾರೆ.