ಬುದಪೆಸ್ಟ್, ಫೆ 23 (DaijiworldNews/SM): ಐಟಿಟಿಎಫ್ ವಿಶ್ವ ಟೂರ್ ಹಂಗೇರಿಯನ್ ಓಪನ್ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.
ಭಾರತದ ಅಚಂತಾ ಕಮಲ್ ಹಾಗೂ ಜಿ. ಸತಿಯನ್ ಜೋಡಿ ಐಟಿಟಿಎಫ್ ವಿಶ್ವ ಟೂರ್ ಹಂಗೇರಿಯನ್ ಓಪನ್ ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಜರ್ಮನಿಯ ಬೆನೆಡಿಕ್ತ್ ದುಡಾ ಮತ್ತು ಪ್ಯಾಟ್ರಿಕ್ ಫ್ರಾಂಜಿಸ್ಕಾ ಜೋಡಿಯ ವಿರುದ್ಧ ಭಾರತೀಯ ಜೋಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಫೈನಲ್ ಪಂದ್ಯದಲ್ಲಿ 1-3 ಅಂತರದಲ್ಲಿ 16ನೇ ಶ್ರೇಯಾಂಕಿತ ಜರ್ಮನಿಯ ಬೆನೆಡಿಕ್ತ್ ದುಡಾ ಮತ್ತು ಪ್ಯಾಟ್ರಿಕ್ ಫ್ರಾಂಜಿಸ್ಕಾ ಜೋಡಿಯ ವಿರುದ್ಧ ಭಾರತದ ಜೋಡಿ ಸೋಲನುಭವಿಸಿದೆ. ಇದರಿಂದಾಗಿ ಚಿನ್ನದ ಬದಲು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.