ಕ್ರೈಸ್ಟ್ ಚರ್ಚ್, ಮಾ 02 (DaijiworldNews/SM): ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಇದೀಗ ಟೆಸ್ಟ್ ಸರಣಿಯನ್ನು ಕೂಡ ಟೀಂ ಇಂಡಿಯಾ ಹೀನಾಯವಾಗಿ ಸೋತುಕೊಂಡಿದೆ. ಎರಡು ವಿಭಾಗದಲ್ಲೂ ನ್ಯೂಜಿಲ್ಯಾಂಡ್ ತಂಡ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಟೆಸ್ಟ್ ಕ್ರಿಕೆಟ್ ಸರಣಿ ಸೋಲಿಗೆ ಕೆಲವೊಂದು ವೈಫಲ್ಯಗಳು ಹಾಗೂ ಪ್ರಮುಖ ಆಟಗಾರರ ಅಲಭ್ಯರಾಗಿರುವುದು ಪ್ರಮುಖ ಕಾರಣ ಎಂಬುವುದು ಎದ್ದು ಕಾಣುತ್ತಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲೂ ಹೀನಾಯ ಸೋಲನುಭವಿಸಿರುವುದು ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆಯನ್ನುಂಟುಮಾಡಿದೆ. ಇನ್ನು ಈ ಪಂದ್ಯದ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ. ಆದರೆ, ಸೋಲಿನ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರೊಬ್ಬರು ವಿರಾಟ್ ರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಕೊಹ್ಲಿ ಕೆಂಡಾಮಂಡಲರಾಗಿದ್ದಾರೆ.
ಕೊಹ್ಲಿ ಮೈದಾನದಲ್ಲಿ ತಮ್ಮ ಆಕ್ರಮನಕಾರಿ ಮನೋಭಾವದ ಕುರಿತು ಪತ್ರಕರ್ತರೊಬ್ಬರು ಕೊಹ್ಲಿಯವರನ್ನು ಪ್ರಶ್ನಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಅಲ್ಲಿ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಮೊದಲು ಅಲ್ಲೇನಾಯಿತು ಅದನ್ನು ತಿಳಿದು ಕೊಂಡ ಮಾತನಾಡಿ. ಅರ್ಧ ಸತ್ಯ ತಿಳಿದು ಪ್ರಶ್ನೆ ಕೇಳಲು ಬರಬೇಡಿ ಎಂದು ಏರು ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ಈ ನಡುವೆ ತಮ್ಮ ಬ್ಯಾಟಿಂಗ್ ಕುರಿತಂತೆ ಕೇಳಿರುವ ಪ್ರಶ್ನೆಗೂ ಕೊಹ್ಲಿ ಕೆಂಡಾಮಂಡಲರಾಗಿದ್ದಾರೆ. ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂದಿದ್ದಾರೆ.
ಇದಕ್ಕೂ ಮೊದಲು ತಮ್ಮ ಬ್ಯಾಟಿಂಗ್ ಕುರಿತು ಕೇಳಿದ್ದ ಪ್ರಶ್ನೆಗೂ ಕಿಡಿಕಾರಿದ್ದ ಕೊಹ್ಲಿ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಹೊರಗಿನ ಜನರಂತೆ ಯೋಚಿಸಲು ನಾನು ಬಯಸುವುದಿಲ್ಲ. ಒಂದು ಇನ್ನಿಂಗ್ ನಲ್ಲಿ ವಿಫಲವಾಗಿದ್ದಕ್ಕೆ, ಹೊರಗಡೆ ನನ್ನ ಬ್ಯಾಟಿಂಗ್ ಬಗ್ಗೆ ಟೀಕೆ ಮಾಡುತ್ತಿರುವುದು ನನಗೆ ತಿಳಿದಿದೆ ಈ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ನಿರಂತರ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಭಾರತ ತಂಡ ಕಳೆದ ಎರಡು ಸರಣಿಗಳಲ್ಲಿ ಸತತ ಸೋಲನುಭವಿಸಿದೆ. ಏಕದಿನ ಸರಣಿ ಹಾಗೂ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲನುಭವಿಸಿದೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ. ಅತಿಯಾದ ಆತ್ಮ ವಿಶ್ವಾಸ, ತಪ್ಪುಗಳನ್ನು ತಿದ್ದಿಕೊಂಡಲ್ಲಿ ಮಾತ್ರವೇ ಸರಣಿ ಸೋಲಿನಿಂದ ಪಾರಾಗಬಹುದು ಎಂಬುವುದು ವಿಮರ್ಶಕರ ಮಾತಾಗಿದೆ.