ಮೆಲ್ಬೋರ್ನ್, ಮಾ 09(DaijiworldNews/SM): ಐಸಿಸಿ ಮಹಿಳಾ ಟಿ-೨೦ ವಿಶ್ವಕಪ್ ನ ಪ್ರಶಸ್ತಿ ಹಂತದಲ್ಲಿ ಎಡವಿದ ಭಾರತ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಇದೀಗ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕಾರ್ ಪ್ರತಿಕ್ರಿಯೆ ನೀಡಿದ್ದು, ಪ್ರತಿಭಾವಂತ ಆಟಗಾರರನ್ನು ಗುರುತಿಸಲು ಮುಂದಿನ ವರ್ಷ ಮಹಿಳಾ ಐಪಿಎಲ್ ಆಯೋಜಿಸಿ ಎಂಬುವುದಾಗಿ ಸಲಹೆ ನೀಡಿದ್ದಾರೆ.
ಮಹಿಳಾ ಟಿ-20 ವಿಶ್ವಕಪ್ ಫೈನಲ್ ನಲ್ಲಿ ಭಾರತ ತಂಡದ ಸೋಲಿನ ಬೆನ್ನಲ್ಲೇ ಗವಾಸ್ಕರ್ ನೀಡಿರುವ ಈ ಹೇಳಿಕೆ ಸಾಕಷ್ಟು ಮಹತ್ವಪಡೆದುಕೊಂಡಿದೆ.
2021ರಿಂದ ಮಹಿಳಾ ಐಪಿಎಲ್ ಟೂರ್ನಿಯನ್ನೂ ಆಯೋಜಿಸಲು ಯೋಜನೆ ರೂಪಿಸುವಂತೆ ನಾನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಸಲಹೆ ನೀಡುತ್ತಿದ್ದೇನೆ ಎಂದಿರುವ ಅವರು, ಈ ಮೂಲಕ ಹೆಚ್ಚು ಪ್ರತಿಭೆಗಳು ಬೆಳಕಿಗೆ ಬರಲಿವೆ ಎಂದಿದ್ದಾರೆ. ಈಗಾಗಲೇ ತಂಡದಲ್ಲಿ ಸಾಕಷ್ಟು ಅಮೂಲ್ಯ ರತ್ನಗಳಿವೆ. ಇವುಗಳೊಂದಿಗೆ ಮತ್ತಷ್ಟು ಸೇರಿಕೊಂಡಾಗ ತಂಡ ಬಲಿಷ್ಠಗೊಳ್ಳಲಿದೆ. ವನಿತೆಯರಿಗೂ ಐಪಿಎಲ್ ನಡೆದದಲ್ಲಿ ಮತ್ತಷ್ಟು ಪ್ರತಿಭೆಗಳು ತಂಡ ಸೇರ್ಪಡೆಗೊಳ್ಳಲಿವೆ ಎಂದಿದ್ದಾರೆ.