ಮುಂಬೈ, ಮಾ.12 (DaijiworldNews/PY) : 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 29ರಂದು ಆರಂಭವಾಗಲಿದ್ದು, ವಾಂಖೆಡೆ ಕ್ರೀಂಡಾಗಣದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವುನ ಮೊದಲ ಪಂದ್ಯ ಪ್ರಾರಂಭವಾಗಲಿದೆ. ಆದರೆ, ಭಾರತದಲ್ಲಿ ಕೊರೊನಾ ವೈರಸ್ನ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಈ ವರ್ಷ ಐಪಿಎಲ್ ರದ್ದಾಗಬಹುದೆಂದು ಕ್ರಿಕೆಟ್ ಅಭಿಮಾನಿಗಳು ಭಯಭೀತರಾಗಿದ್ದಾರೆ.
ಹೊಸ ಕೊರೊನಾ ವೈರಸ್ ಅನ್ನು ಏಕಾಏಕಿ ಸಾಂಕ್ರಾಮಿಕ ರೋಗ ಎಂದು ವಿಶ್ವ ಸಂಸ್ಥೆ ಕರೆದಿದ್ದು, ವಿಶ್ವದಾತ್ಯಂತ ಕೊರೊನಾ ವೈರಸ್ ಸೋಂಕು ದೃಢಪಡಿಸಿದ ಪ್ರಕರಣಗಳ ಸಂಖ್ಯೆ 124,000 ದಾಟಿದೆ. ಭಾರತದಲ್ಲಿ 60ಕ್ಕೇರಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ, ಬುಧವಾರ , ಆದರೆ, ಈಗ ರಾಜತಾಂತ್ರಿಕ, ಆಡಳಿತಾತ್ಮಕ ಮತ್ತು ಉದ್ಯೋಗ ವೀಸಾಗಳನ್ನು ಹೊರತುಪಡಿಸಿ ಉಳಿದೆಲ್ಲ ವೀಸಾಗಳು ರದ್ದು ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ಒಂದು ತಿಂಗಳಕಾಲ ಇದೇ ಆದೇಶ ಮುಂದುವರಿಯಲಿದೆ. ಹಾಗಾಗಿ ವಿದೇಶಿ ಆಟಗಾರರು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲ.
ಈ ವಿಚಾರವಾಗಿ ಭಾರತೀಯ ಸಾಮಾಜಿಕ ಮಾಧ್ಯಮ ಆಶ್ಚರ್ಯಗೊಂಡಿದೆ. ಯಾವುದೇ ಕಾರಣಕ್ಕೂ ಐಪಿಎಲ್ ಅನ್ನು ಬಿಸಿಸಿಐ ರದ್ದುಗೊಳಿಸಬಾರದು ಎಂದು ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮೂಲಕ ತಿಳಿಸಿದ್ಧಾರೆ. ಕೊರೊನಾ ವೈರಸ್ ಕಾರಣದಿಂದ ಐಪಿಎಲ್ ರದ್ದುಗೊಂಡರೆ ಜೀವನವು ಬದುಕಲು ಯೋಗ್ಯವಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳಿದ್ಧಾರೆ.
ಐಪಿಎಲ್ ವಿಚಾರವಾಗಿ ಮಾರ್ಚ್ 14ರಂದು ಮುಂಬೈನಲ್ಲಿ ನಡೆಯುವ ಈವೆಂಟ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.