ಲಂಡನ್, ಮಾ 13 (DaijiworldNews/SM): ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧೂ ಕ್ವಾರ್ಟರ್ ಫೈನಲ್ಸ್ ಗೆ ಲಗ್ಗೆ ಇರಿಸಿದ್ದಾರೆ.
ಗುರುವಾರ ತಡರಾತ್ರಿ ಪ್ರಿ ಕ್ವಾರ್ಟರ್ ಫೈನಲ್ಸ್ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ವಿಶ್ವದ 6ನೇ ರ್ಯಾಂಕಿನ ಸಿಂಧೂ, ಕೊರಿಯಾ ಸುಂಗ್ ಜಿ ಹ್ಯುನ್ ವಿರುದ್ಧ ಜಯಗಳಿಸಿದ್ದಾರೆ. ಹಾಗೂ ಅಂತಿಮ ಆರರ ಘಟ್ಟಕ್ಕೆ ಎಂಟ್ರಿಯನ್ನು ಪಡೆದುಕೊಂಡಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಸಿಂಧೂ ವಿಶ್ವದ 12ನೇ ರಾಂಕಿನ ಸುಂಗ್ ಜಿ ಹ್ಯುನ್ ಅವರನ್ನು 21-19-21-15 ನೇರ ಗೇಮ್ ಗಳಿಂದ ಮಣಿಸಿದ್ದಾರೆ. ಈ ಪಂದ್ಯಕ್ಕೆ ಅವರು ಬಳಸಿಕೊಂಡಿದ್ದು ಕೇವಲ 49 ನಿಮಿಷಗಳಷ್ಟೇ.
ಕ್ವಾರ್ಟರ್ ಫೈನಲ್ ನಲ್ಲಿ ಸಿಂಧೂ ಜಪಾನಿನ ಆರನೇ ಶ್ರೇಯಾಂಕಿತೆ ನೊಜೋಮಿ ಓಕುಹರ ಅಥವಾ ಡೆನ್ಮಾರ್ಕ್ ನ ಲೈನ್ ಹಾಜ್ಮಾರ್ಕ್ ಜೀರ್ಸ್ ಫೀಡ್ತ್ ಅವರನ್ನು ಎದುರಿಸಬೇಕಾಗಿದೆ. ಮತ್ತೊಂದೆಡೆ ಡಬಲ್ಸ್ ವಿಭಾಗದಲ್ಲಿ ಭಾರತದ ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಿಂದ ಹೊರನಡೆದಿದ್ದಾರೆ.
ಅಶ್ವಿನಿ ಮತ್ತು ಸಿಕ್ಕಿ 13-21, 14-21ರಲ್ಲಿ ಏಳನೇ ಶ್ರೇಯಾಂಕದ ಜಪಾನಿನ ಮಿಸಾಕಿ ಮಾಟ್ಸುಟೊಮೊ ಮತ್ತು ಅಯಕಾ ಟಕಹಾಶಿ ವಿರುದ್ಧ ಪರಾಭಾವಗೊಲ್ಲುವ ಮೂಲಕ ಟೂರ್ನಿಯಿಂದ ಗೇಟ್ ಪಾಸ್ ಆಗಿದ್ದಾರೆ. ಇದೀಗ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿರುವ ಸಿಂಧೂ ಅವರ ಮೇಲೆ ಭರವಸೆ ಹೆಚ್ಚಾಗಿದ್ದು, ಅಭಿಮಾನಿಗಳು ಶುಭ ಹಾರೈಕೆಗಳನ್ನು ಸಲ್ಲಿಸುತ್ತಿದ್ದಾರೆ.