ಮೆಲ್ಬರ್ನ್, ಮಾರ್ಚ್ 15 (DaijiworldNews/SM): ಆಸ್ಟೇಲಿಯಾ ಮತ್ತು ನ್ಯೂಜಿಲೆಂಡ್ ನಡುವಣ ಏಕದಿನ ಪಂದ್ಯಗಳ ಸರಣಿಯನ್ನು ಮುಂದೂಡಲಾಗಿದೆ. ಕೊರೊನಾ ವೈರಸ್ ಭೀತಿಯಿಂದ ನ್ಯೂಜಿಲೆಂಡ್ ಪ್ರಯಾಣ ನಿರ್ಬಂಧ ಹೇರಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.
ಶುಕ್ರವಾರ ಮೊದಲ ಏಕದಿನ ಪಂದ್ಯ ಪ್ರೇಕ್ಷಕರ ನಿರ್ಬಂಧದ ನಡುವೆ ನಡೆದಿತ್ತು. ಆತಿಥೇಯ ತಂಡವಾದ ನ್ಯೂಜಿಲೆಂಡ್ ಸಿಡ್ನಿಯ ಖಾಲಿ ಕ್ರೀಡಾಂಗಣದಲ್ಲಿ ಜಯಿಸಿದ್ದರು.
ಕೊರೊನಾ ಸೋಂಕನ್ನು ತಡೆಗಟ್ಟುವ ಕ್ರಮವಾಗಿ ನ್ಯೂಜಿಲೆಂಡ್ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.
ಭಾನುವಾರ ಮಧ್ಯರಾತ್ರಿಯ ನಂತರ ದೇಶಕ್ಕೆ ಬರುವ ಎಲ್ಲರೂ ೧೪ದಿನಗಳ ಕಾಲ ಪ್ರತ್ಯೇಕವಾಗಿರಬೇಂದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೇರ್ನ್ ಶನಿವಾರ ಕಟ್ಟಪ್ಪಣೆ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ, ನ್ಯೂಜಿಲೆಂಡ್ ನಲ್ಲಿ ಮೂರು ಪಂದ್ಯಗಳ ಮೂರು ಪಂದ್ಯಗಳ ಟಿ-೨೦ ಸರಣಿಯಲ್ಲಿ ಆಡಬೇಕಿದ್ದ ಆಸ್ಟ್ರೇಲಿಯಾ ಈಗ ಹಿಂದೆ ಸರಿಯಬೇಕಾಗಿದೆ. ೧೪ದಿನಗಳ ಕಾಲ ಪ್ರತ್ಯೇಕವಾಗಿರಿಸುವ ನಿಯಮ ಅನ್ವಯವಾಗುವ ಕಾರಣ ಈ ಸರಣಿ ನಡೆವುದು ಅನುಮಾನ ಎನ್ನಲಾಗುತ್ತಿದೆ.
ಫರ್ಗ್ಯುಸನ್ ನಿರಾಳ : ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಜ್ವರದಿಂದ ಬಳಲುತ್ತಿದ್ದ ಫರ್ಗ್ಯುಸನ್ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಅವರಲ್ಲಿ ಕೊರೊನಾ ಸೋಂಕು ಇಲ್ಲದಿರುವುದು ದೃಢಪಟ್ಟಿದೆ.