ನವದೆಹಲಿ, ಮಾ 16 (DaijiworldNews/SM): ಏಕದಿನ ಪಂದ್ಯ, ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಸಿಡಿಸುವ ಆಟಗಾರರು ಅಪರೂಪಕ್ಕೆ ಕಾಣಸಿಗುತ್ತಾರೆ. ದ್ವಿಶತಕ ಸಿಡಿಸುವ ಪಂದ್ಯವನ್ನು ವೀಕ್ಷಕರು ಮತ್ತೆ ಮತ್ತೆ ನೋಡಬಯಸುತ್ತಾರೆ. ಆದರೆ ಇದೀಗ ಸೀಮಿತ ಓವರ್ ಗಳ ಪಂದ್ಯದಲ್ಲೂ ದ್ವಿಶತಕ ಸಿಡಿಸಬಹುದಂತೆ. ಟಿ-೨೦ ಪಂದ್ಯಗಳಲ್ಲಿ ಭಾರತದ ಸ್ಪೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮಾತ್ರವೇ ದ್ವಿಶತಕ ಸಿಡಿಸಬಲ್ಲರು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ಹೇಳಿದ್ದಾರೆ.
ಅರೇ, 20-20 ಪಂದ್ಯದಲ್ಲಿ ತಂಡದ ಒಟ್ಟು ಮೊತ್ತ ಅಬ್ಬಬ್ಬಾ ಅಂದ್ರೆ ಇನ್ನೂರರ ಗಡಿದಾಟುವುದು ಅಪರೂಪ. ಆದ್ರೆ, ಇಲ್ಲೂ ಕೂಡ ದ್ವಿಶತಕ ಬಾರಿಸಬಹುದು ಎಂದರೆ ಊಹಿಸಲು ಸ್ವಲ್ಪ ಕಷ್ಟದ ವಿಚಾರ. ಆದರೆ, ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಬ್ರಾಡ್ ಹಾಗ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದಿದ್ದು, ರೋಹಿತ್ ಮಾತ್ರವೇ ಈ ಸಾಧನೆ ಮಾಡಬಲ್ಲರು ಎಂದಿದ್ದಾರೆ.
ಪ್ರಸಕ್ತ ಕ್ರಿಕೆಟಿಗರ ಪೈಕಿ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.
ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಇದುವರೆಗೆ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ದ್ವಿಶತಕ ಸಿಡಿಸಿಲ್ಲ. ಶತಕ ಸಿಡಿಸುವುದೇ ಅಪರೂಪವಾಗಿದ್ದು, ಈ ಬಗ್ಗೆ ಬ್ರಾಡ್ ಹಾಗ್ ಅವರನ್ನು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದರು. ತಮ್ಮ ಪ್ರಕಾರ ಟಿ20 ಕ್ರಿಕೆಟ್ನಲ್ಲಿ ಮೊದಲ ದ್ವಿಶತಕ ಸಿಡಿಸಬಲ್ಲ ಆಟಗಾರ ಯಾರು ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಾಗ್, ‘ಸದ್ಯಕ್ಕೆ ರೋಹಿತ್ ಶರ್ಮಾ ಅವರಿಗೆ ಮಾತ್ರವೇ ಆ ಸಾಮರ್ಥ್ಯವಿದೆ ಎಂದು ಅಂದುಕೊಂಡಿದ್ದೇನೆ. ಉತ್ತಮ ಸ್ಟ್ರೈಕ್ರೇಟ್, ಒಳ್ಳೆಯ ಟೈಮಿಂಗ್, ಕ್ರೀಡಾಂಗಣದ ಎಲ್ಲಾ ಮೂಲೆಗಳಿಗೂ ಸಿಕ್ಸರ್ ಸಿಡಿಸಬಲ್ಲ ಸಾಮಾರ್ಥ್ಯ ಹೊಂದಿರುವ ಅವರು ಮಾತ್ರ ದ್ವಿಶತಕ ಸಿಡಿಸಬಲ್ಲರು ಎಂದು ಪ್ರತಿಕ್ರಿಯೆ ನೀಡಿದ್ದಾರೆ.