ನವದಹೆಲಿ, ಮಾ 18(DaijiworldNews/SM): ಕೊರೋನಾ ವೈರಸ್ ಭೀತಿಯಿಂದಾಗಿ ರದ್ದಾಗುವ ಭೀತಿಯಲ್ಲಿರುವ ಐಪಿಎಲ್ 2020 ಟೂರ್ನಿಯನ್ನು ಮುಂದೂಡಿ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ನಡೆಸುವ ಸಾಧ್ಯತೆಗಳಿವೆ.
ಕೋವಿಡ್-19ನಿಂದಾಗಿ ಐಪಿಯಲ್ ನಡೆಯುವುದು ಅನುಮಾನ. ಮುಂದಿನ ತಿಂಗಳಲ್ಲಿ ವೈರಸ್ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ, ದೇಶದಲ್ಲಿ 13ನೇ ಆವೃತ್ತಿ ಐಪಿಎಲ್ ಮುಂದುಡಿ ಜುಲೈ ತಿಂಗಳ ಬಳಿಕ ನಡೆಸುವ ನಿರ್ಧಾರಗಳನ್ನು ಬಿಸಿಸಿಐ ಕೈಗೊಳ್ಳಬಹುದು ಎನ್ನಲಾಗಿದೆ. ಐಪಿಎಲ್ ನಡೆಯುವುದು ಅನುಮಾನ ಎಂಬುವುದು ಈಗಾಗಲೇ ಎಲ್ಲರಿಂದಲೂ ಕೇಳಿಬರುತ್ತಿರುವ ಮಾತುಗಳು.
ಮಾರ್ಚ್ 14ರಂದು ಬಿಸಿಸಿಐ ಅಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿ ಗೊಂದಲಕ್ಕೀಡಾಗಿರುವ ಐಪಿಎಲ್ ಆಯೋಜನೆ ಕುರಿತು ವಿಸ್ತೃತ ಚರ್ಚೆ ನಡೆಸಿದರಾದರೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯದಲ್ಲಿ ಏಷ್ಯಾ ಕಪ್ ಟಿ20 ನಡೆಯಲಿದೆ. ಈ ಅಧಿಯಲ್ಲಿ ಕಡಿಮೆ ಟೂರ್ನಿಗಳು ಇರುವ ಕಾರಣ 13ನೇ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ. ಆದರೆ ಇಲ್ಲಿಯ ತನಕ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ಸ್ಪಶ್ಟವಾದ ಉತ್ತರ ಸಿಗುವ ಸಾಧ್ಯತೆಗಳಿವೆ.