ನವದೆಹಲಿ, ಮಾ 19 (DaijiworldNews/SM): ಕ್ರಿಕೆಟ್ ಎಂದಾಕ್ಷಣ ಐಷಾರಾಮಿ ವ್ಯವಸ್ಥೆಗಳು, ಹಾಗೂ ದುಂದು ವೆಚ್ಚಗಳು ನೆನಪಾಗುತ್ತವೆ. ಇದೇ ಕಾರಣಕ್ಕೆ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಬಿಸಿಸಿಐ ಮುಂದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಆಯ್ಕೆ ಸಮಿತಿಯವರಿಗೆ ಮಾತ್ರವೇ ಐಶಾರಾಮಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕೈಗೊಂಡಿರುವ ಮಹತ್ವದ ನಿರ್ಧಾರ ಇದಾಗಿದ್ದು, ಹಿರಿಯ ಹಾಗೂ ಜೂನಿಯರ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಿಗೆ ಮಾತ್ರ ಐಶಾರಾಮಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಪ್ಲಾನ್ ಮಾಡಲಾಗಿದೆ.
ಇನ್ನು ಬಿಸಿಸಿಐ ಜನರಲ್ ಮ್ಯಾನೇಜರ್ ಕೂಡ ಸಾಮಾನ್ಯರಂತೆ ಆರ್ಥಿಕ ವರ್ಗದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಏಳು ಗಂಟೆಗಳಿಗಿಂತ ಅಧಿಕ ಸಮಯದ ವಿಮಾನ ಪ್ರಯಾಣದಲ್ಲಿ ಎಲ್ಲಾ ಆಯ್ಕೆದಾರರಿಗೆ ವ್ಯಾಪಾರ ವರ್ಗದ ಆಸನಗಳನ್ನು ನೀಡಲು ನಿರ್ಧಾರವಾಗಿದೆ. ಮತ್ತು ಏಳು ಗಂಟೆಗಳ ಕಡಿಮೆ ಅವಧಿಯ ಪ್ರಯಾಣದಲ್ಲಿ ಈ ಸೌಲಭ್ಯ ಇಲ್ಲ ಎಂದು ಬಿಸಿಸಿಐ ನಿರ್ಧಾರ ಕೈಗೊಂಡಿದೆ.
ಇನ್ನು ಮುಂದೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸುನಿಲ್ ಜೋಶಿ ಹಾಗೂ ಆಶೀಶ್ ಕಪೂರ್ ಅವರು ಮಾತ್ರ ಬಿಸಿನೆಸ್ ಕ್ಲಾಸ್ ಪ್ರಯಾಣ ಬೆಳೆಸಲಿದ್ದಾರೆ.