ನವದೆಹಲಿ, ಮಾ 22 (DaijiworldNews/SM): ದೇಶದ ಯಾವುದೇ ಮೂಲೆಗೆ ಇಂದು ತೆರಳಿದರೂ ಸುದ್ದಿ ಇರುವುದು ಕೊರೊನಾ. ಅಷ್ಟರ ಮಟ್ಟಿಗೆ ಜನತೆಯಲ್ಲಿ ನಡುಕವನ್ನುಂಟು ಮಾಡಿದೆ. ಈ ನಡುವೆ ಭಾನುವಾರದಂದು ದೇಶದಲ್ಲಿ ಜನತಾ ಕರ್ಫ್ಯೂ ಆಚರಿಸಲಾಗಿದ್ದು, ಇದನ್ನು ಕ್ರಿಕೆಟಿಗ ಶ್ಲಾಘಿಸಿದ್ದಾರೆ. ಇದೇರೀತಿ ದೇಶದ ಜನತೆ ಜಾಗೃತರಾಗಿದ್ದಲ್ಲಿ ರೋಗ ನಿಯಂತ್ರಿಸಬಹುದು ಎಂದಿದ್ದಾರೆ.
ಈ ಬಗ್ಗೆ ಅಶ್ವಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ದೇಶದಲ್ಲಿ ಜನತಾ ಕರ್ಫ್ಯೂ ಆಚರಣೆಗೆ ಜನತೆ ಉತ್ತಮವಾಗಿ ಸ್ಪಂಧಿಸಿದ್ದಾರೆ. ಅದರಂತೆ ಜನತಾ ಕರ್ಫ್ಯೂ ನಂಬಲಾಗದ ಆರಂಭವನ್ನು ಕಂಡಿದೆ. ಈ ದಿನದ ನಂತರವೂ ಕೆಲವು ದಿನ ಮುಂದುವರಿಯುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರವನ್ನು ಅನುಸರಿಸಲಾಗುವುದು ಎಂದು ನನ್ನ ಭಾವನೆ ಎಂಬುವುದಾಗಿ ಟ್ವೀಟ್ ಮಾಡಿದ್ದಾರೆ.
ಹೀಗೆ ಸೋಂಕಿನ ಬಗ್ಗೆ ಜನತೆ ಎಚ್ಚರವಾಗಿದ್ದಲ್ಲಿ ಮುಂದಿನ ದಿನಗಳಲ್ಲಿ ಸೋಂಕು ನಿಯಂತ್ರಿಸಲು ಸಾಧ್ಯವಿದ್ದು, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬಹುದೆಂದಿದ್ದಾರೆ. ಇನ್ನು ಅಶ್ವಿನ್ ಮಾತ್ರವಲ್ಲದೆ, ಇರ್ಫಾನ್ ಪಠಾನ್ ಸೇರಿದಂತೆ ಕೆಲವು ಕ್ರಿಕೆಟಿಗರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.